ಕಾಣಿಯೂರು: ಬೆಳಂದೂರು ಅಂಗನವಾಡಿ ಕೇಂದ್ರದಲ್ಲಿ ಸುಮಾರು 34ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಮಲ ಅಗಳಿ ಮೂಲೆ ಇವರಿಗೆ ಕಳುವಾಜೆ ಕುಶಾಲಪ್ಪ ಗೌಡ ಅವರ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗುರುಸ್ವಾಮಿ ನಾರಾಯಣ್ ಕೆಡೆಂಜಿ, ಅಚ್ಯುತ್ತ ಗೌಡ ಕಂಪ ಕಳುವಾಜೆ, ಭಾಸ್ಕರ ಗೌಡ ಕಳುವಾಜೆ, ಯಶವಂತ ಗೌಡ ಕಳುವಾಜೆ, ದೇವಿಪ್ರಸಾದ್ ಸಜಂಕು, ಪುಷ್ಪಾವತಿ ಕಳುವಾಜೆ ಉಪಸ್ಥಿತರಿದ್ದರು. ವೇಣುಗೋಪಾಲ್ ಕಳುವಾಜೆ ಸ್ವಾಗತಿಸಿದರು.