ಜ.17: ಪಡ್ನೂರು ದೇಂತಡ್ಕ ವನಶಾಸ್ತಾರ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ

0

ಪುತ್ತೂರು: ಪಡ್ನೂರು ಗ್ರಾಮದ ದೇಂತಡ್ಕ ಶ್ರೀ ವನಶಾಸ್ತಾರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಜ.17ರಂದು ವೇ.ಮೂ ಮಿತ್ತೂರು ಪುರೋಹಿತ ಸದಾಶಿವ ಭಟ್‌ರವರ ಹಿರಿತನದಲ್ಲಿ ವೇ.ಮೂ ಮಿತ್ತೂರು ಪುರೋಹಿತ ತಿರುಮಲೇಶ್ವರ ಭಟ್‌ರವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಬೆಳಿಗ್ಗೆ ಗಣಪತಿ ಹವನ, ಏಕಾದಶ ರುದ್ರಾಭಿಷೇಕ, ನವಕ ಕಲಶ, ನಾಗತಂಬಿಲ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಸಾರ್ವಜನಿಕ ದುರ್ಗಾಪೂಜೆ, ಸಾರ್ವಜನಿಕ ಆಶ್ಲೇಷ ಬಲಿ, ದೈವಗಳ ತಂಬಿಲ, ದೇವರಿಗೆ ಮಹಾಪೂಜೆ, ರಂಗಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಪ್ರತಿಷ್ಠಾ ವಾರ್ಷಿಕ ಮಹೋತ್ಸವದಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ನಡೆಯುವ ಭಜನಾ ಕಾರ್ಯಕ್ರಮದಲ್ಲಿ ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ, ಬೇರಿಕೆ ಶ್ರೀ ಆದಿಶಕ್ತಿ ಭಜನಾ ಮಂಡಳಿ, ದೇಂತಡ್ಕ ಶ್ರೀ ವನಶಾಸ್ತಾರ ಭಜನಾ ಮಂಡಳಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಡ್ನೂರು ಒಕ್ಕೂಟ, ಪಡ್ನೂರು ಶ್ರೀ ಜನಾರ್ದನ ಯುವಕ ಮಂಡಳ, ಶ್ರೀ ಸರಸ್ವತಿ ಯುವತಿ ಮಂಡಳ ಪಡ್ನೂರು, ಬನ್ನೂರು ಶ್ರೀದುರ್ಗಾಗಣಪತಿ ಗಾನ ಕಲಾ ವೃಂದ ಬಲಮುರಿ, ಬನ್ನೂರು ನವೋದಯ ಮಹಿಳಾ ಮಂಡಲ, ಬೇರಿಕೆ ವಿದ್ಯಾ ಸರಸ್ವತಿ ಮಾತೃ ಮಂಡಳಿ ಸದಸ್ಯೆಯರು, ಬಲ್ನಾಡು ಭಟ್ಟಿ ವಿನಾಯಕ ಭಜನಾ ಮಂಡಳಿಯವರಿಂದ ಭಜನೆ ಹಾಗೂ ಮದಗಶ್ರೀ ಕುಣಿತಾ ಭಜನಾ ಮಂಡಳಿಯವರಿಂದ ಕುಣಿತ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಯಕ್ಷಸಾರಥಿ ಯಕ್ಷಕಲಾ ಬಳಗ ಪುತ್ತೂರು ಇವರಿಂದ ‘ಏಕಾದಶೀ ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here