ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ, ರಂಗಪೂಜೆ, ಧಾರ್ಮಿಕ ಸಭೆ

0


ಆಲಂಕಾರು: ಸೀಮೆ ದೇವಸ್ಥಾನ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ, ರಂಗಪೂಜೆ,ಧಾರ್ಮಿಕ ಸಭೆ ನಡೆಯಿತು. ಬೆಳಿಗ್ಗೆ ನಾಗತಂಬಿಲ, ದೈವಗಳಿಗೆ ತಂಬಿಲ ಮದ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆದು ಸಂಜೆ ಸಾರ್ವಜನಿಕ ಸತ್ಯನಾರಾಯಣ ದೇವರ ಪೂಜೆ,ಶ್ರೀ ದೇವಿಗೆ ರಂಗಪೂಜೆ ನಡೆದು ನಂತರ ಸಭಾಕಾರ್ಯಕ್ರಮ ನಡೆಯಿತು.

ಕಡಬ ಉಪ ತಹಶೀಲ್ದಾರ್ ರಾದ ಗೋಪಾಲ.ಕೆ ಧಾರ್ಮಿಕ ಉಪನ್ಯಾಸ ನೀಡಿ ದೇವಸ್ಥಾನ ಸರಕಾರದ ಅಧೀನದಲ್ಲಿ ಇದ್ದರೂ ಸರಕಾರದಿಂದ ದೇವಸ್ಥಾನಕ್ಕೆ ಯಾವುದೇ ಹಣ ಬರುವುದಿಲ್ಲ. ಊರ ಭಕ್ತಾದಿಗಳು ದೇವಸ್ಥಾನವನ್ನು ಮುನ್ನೇಡಿಸಿಕೊಂಡು ಹೋಗಬೇಕು. ಸರಕಾರದಿಂದ ನಿರ್ಮಾಣಕ್ಕೆ 25 ಲಕ್ಷ ಅನುದಾನ ಬಂದಿದೆ. ದೇವರ ಅನುಗ್ರಹ ಇದ್ದರೆ. ಊರು ಸುಭೀಕ್ಷೆಯಲ್ಲಿ ಇರುತ್ತದೆ.
ಊರಿನ‌ ಗ್ರಾಮ, ಸೀಮೆ ದೇವಸ್ಥಾನ ಸರಿಯಾಗಿ ಇದ್ದರೆ ಊರಿಗೆ ಯಾವುದೇ ತರದ ತೊಂದರೆಗಳು ಬರುವುದಿಲ್ಲ. ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಕ್ಕೆ ಬಂದಿದ್ದು. ಸರಕಾರದ ವತಿಯಿಂದ ಜೀರ್ಣೋದ್ಧಾರಕ್ಕೆ ಅಡಳಿತ‌ ಮಂಜೂರಾತಿ ದೊರೆತ್ತಿದೆ. ಊರು ಮತ್ತು ಪರವೂರ ಭಕ್ತಾಧಿಗಳ ಸಹಕಾರದಿಂದ ಶ್ರೀ ಕ್ಷೇತ್ರ ಸಂಪೂರ್ಣ ಜೀರ್ಣೋದ್ಧಾರಗೊಳ್ಳಬೇಕಾಗಿದೆ ಇದಕ್ಕೆಲ್ಲ ತನು,ಮನ,ಧನಗಳಿಂದ ಭಕ್ತಾದಿಗಳು ಸಹಕರಿಸುವಂತೆ ತಿಳಿಸಿ ನಮ್ಮಲ್ಲಿ ಕುಟುಂಬ ವ್ಯವಸ್ಥೆ ಪದ್ದತಿಯನ್ನು ಬೆಳೆಸಬೇಕು, ತಾಯಿಯಂದಿರು ಮಕ್ಕಳಿಗೆ ಸಂಪತ್ತು ಮಾಡುವ ಬದಲು ಒಳ್ಳೆಯ ಸಂಸ್ಕಾರ, ಸಂಸ್ಕೃತಿ ನೀಡಿ ಸುಂದರ ಕುಟುಂಬ ವ್ಯವಸ್ಥೆಯನ್ನು ಸರಿಪಡಿಸಬೇಕು ಕುಟುಂಬ ಅಭಿವೃದ್ಧಿ ಹೊಂದಿದರೆ ನಮ್ಮ ಗ್ರಾಮ,ತಾಲೂಕು, ಜಿಲ್ಲೆ, ರಾಜ್ಯ,ದೇಶ ಅಭಿವೃದ್ಧಿ ಹೊಂದಿದಂತೆ ನಮ್ಮ ಭವ್ಯಭಾರತದ ಕನಸು ನನಸಾಗುತ್ತದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹೇಮಂತ್ ರೈ ಮನವಳಿಕೆ ಮಾತನಾಡಿ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಿಯ ಮಹಿಮೆ ಅಪಾರ. ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ನಮ್ಮ ಜೀವಿತಾವಧಿಯಲ್ಲಿ ಒಮ್ಮೆ ಸಿಗುವ ಅವಕಾಶ. ಇಂತಹ ಸುಸಂಧರ್ಭದಲ್ಲಿ ನಾವೆಲ್ಲರೂ ಒಟ್ಟು ಸೇರಿ ತನು,ಮನ,ಧನ ಗಳಿಂದ ದೇವಾಲಯದ ಸಮಗ್ರ ಜೀರ್ಣೋದ್ಧಾರದ ಕೆಲಸ ಮಾಡಬೇಕಿದೆ. ಇದಕ್ಕೋಸ್ಕರ ರಾತ್ರಿ ಹಗಲು ದುಡಿದಯುತ್ತಿರುವ ಕಾರ್ಯಕರ್ತರಿಗೆ,ಸ್ವಯಂ ಸೇವಕರಿಗೆ ಅಭಿನಂದನೆ ಸಲ್ಲಿಸಿ,ಶ್ರೀ ದೇವಿಯ ಸಮಗ್ರ ಜೀರ್ಣೋದ್ಧಾರ ದ ಕಲ್ಪನೆಯನ್ನು ಕೊಟ್ಟವರು ಮಾಜಿ ಸಚಿವರಾದ ಅಂಗಾರ ಎಸ್ ರವರು ಸರಕಾರದಿಂದ 25 ಲಕ್ಷ ಅನುದಾನ ಒದಗಿಸಿ ಸಮಗ್ರ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿ, ನಂತರ ಕಡಬ ಉಪತಹಶೀಲ್ದಾರರು ದೇವಸ್ಥಾನದ ಆಡಳಿತಾಧಿಕಾರಿ ಗೋಪಾಲ.ಕೆ ಅದನ್ನು ಅನುಷ್ಠಾನಗೊಳಿಸಿ, ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲ್ಲಾಯವರು ಊರವರ ಪರವಾಗಿ ನೇತೃತ್ವವಹಿಸಿ ಜೀರ್ಣೋದ್ಧಾರ ಕಾರ್ಯ ಮುಂದುವರಿಯುತ್ತಿದೆ. ಅಂದಾಜು 10 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀ ದೇವಿಯ ಗರ್ಭಗುಡಿ, ನಮಸ್ಕಾರ ಮಂಟಪ,ಗಂಗಾದೇವಿ ಗುಡಿ, ಸುತ್ತು ಪೌಲಿ,ಮುಖದ್ವಾರ,38 ಅಡಿ ಎತ್ತರದ ಸ್ವಾಗತ ಗೋಪುರ ,ಬ್ರಹ್ಮರಥ,ಹೊವಿನ ತೇರು ನಿರ್ಮಾಣ ಆಗಬೇಕಾಗಿದೆ. ಇದಕ್ಕೆಲ್ಲ ಊರಪರವೂರ ಭಕ್ತಾದಿಗಳು ಸಹಕರಿಸಿ ಶ್ರೀ ದೇವಾಲಯದ ಸಮಗ್ರ ಜೀರ್ಣೋದ್ಧಾರದಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗುವಂತೆ ವಿನಂತಿಸಿದರು.


ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಸದಾನಂದ ಕುಮಾರ್ ಮಡ್ಯೋಟ್ಟು ಕಾರ್ಯಕ್ರಮ ನಿರೂಪಿಸಿ, ವಿಠಲ ರೈ ಕೊಣಾಲುಗುತ್ತು ಅತಿಥಿಗಳನ್ನು ಸ್ವಾಗತಿಸಿ, ಗಣೇಶ ಹಿರಿಂಜ ಧನ್ಯವಾದ ಸಮರ್ಪಿಸಿದರು. ನಂತರ ಬಲಿ ಹೊರಟು ಉತ್ಸವ ನಡೆದು, ಪ್ರಸಾದ ವಿತರಣೆಯಾಗಿ, ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ವಿಧಾನಸಭಾಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ.ಟಿ .ಶೆಟ್ಟಿ, ಹಲವು ಗಣ್ಯರು ಸೇರಿದಂತೆ ಊರಪರವೂರ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂಧರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಅರ್ಚಕರು, ಸಿಬ್ಬಂದಿ ವರ್ಗದವರು, ಊರಪರವೂರ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here