ಬಡಗನ್ನೂರು: ಶ್ರೀ ಪೂಮಾಣಿ ಕಿನ್ನಿಮಾಣಿ, ರಾಜನ್ ದೈವಸ್ಥಾನ ಪಡುಮಲೆಯಲ್ಲಿ ದೈವಗಳ ನೇಮೋತ್ಸವ ಜ.16 ರಂದು ಪೂರ್ವಾಹ್ನ ಗಂಟೆ 11.ರಿಂದ ಕಿನ್ನಿಮಾಣಿ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 8.ರಿಂದ ಪಾಲಕ್ಕಿ ಉತ್ಸವ, ಬೀರತಂಬಿಲ ನಡೆಯಲಿದೆ. ಬಳಿಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ವೈಭವ ಜರುಗಲಿದೆ.
ಜ.17 : ಬೆಳಗ್ಗೆ ಗಂ 11 ರಿಂದ ಪೂಮಾಣಿ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 08.00ರಿಂದ ಪಾಲಕ್ಕಿ ಉತ್ಸವ, ಬೀರತಂಬಿಲ ನಡೆಯಲಿದ್ದು, ತದನಂತರ ಶ್ರೀ ಪೂಮಾಣಿ-ಕಿನ್ನಿಮಾಣಿ ಸಾಂಸ್ಕೃತಿಕ ವೇದಿಕೆ ಪಡುಮಲೆ ಅರ್ಪಿಸುವ, ಅಭಿನಯ ಕಲಾವಿದರು ಉಡುಪಿ ಅಭಿನಯಿಸುವ ‘ಶಾಂಭವಿ’ ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ.
ಜ.18: ಪೂರ್ವಾಹ್ನ ಗಂ 7 ಕ್ಕೆ ಬೆಳ್ಳಿಪ್ಪಾಡಿ ಪಡುಮಲೆ ಮನೆಯಿಂದ ಮಲರಾಯ ದೈವದ ಭಂಡಾರ ಬಂದು ಮಲರಾಯ ದೈವದ ನೇಮ,11ರಿಂದ ರಾಜನ್ ದೈವ ಪಿಲಿಭೂತ (ವ್ಯಾಘ್ರಚಾಮುಂಡಿ) ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ಸಂಜೆ ಗಂ 5.ರಿಂದ ಕನ್ನಡ್ಕ ತರವಾಡಿನ ದೈವಸ್ಥಾನದಿಂದ ರುದ್ರಾಂಡಿ ದೈವದ ಭಂಡಾರ ಬರುವುದು. ರಾತ್ರಿ ಗಂ 7ಕ್ಕೆ ಪಡುಮಲೆ-ದೊಡ್ಡಮನೆಗೆ ಅವಭೃತ ಸ್ನಾನಕ್ಕೆ ಹೋಗುವುದು, ರುದ್ರಾಂಡಿ ದೈವದ ನೇಮ, ಕಟ್ಟೆಪೂಜೆ, ಧ್ವಜಾವರೋಹಣ, ನವಕಾಭಿಷೇಕ, ಮಂತ್ರಾಕ್ಷತೆ ಬಳಿಕ ಗುಳಿಗ ದೈವದ ನೇಮ ನಡೆಯಲಿದೆ. ರಾತ್ರಿ 8.ರಿಂದ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ಜ.19: ಬೆಳಿಗ್ಗೆ ಗಂಟೆ 10.ಕ್ಕೆ ಪಡುಮಲೆ ದೈವಸ್ಥಾನದ ಪಿಲಿಮಾಡದಲ್ಲಿ ಪಿಲಿಭೂತ ನೇಮ, ಜ. 21 ರಂದು ಪೇರಾಲು ಬುಡು ಬುದ್ಧಿವಂತ ದೈವಸಾನದಲ್ಲಿ ಪಿಲಿಭೂತ ನೇಮ ನಡೆಯಲಿದೆ.