ಉಪ್ಪಿನಂಗಡಿ ಶ್ರೀ ಮಾಧವ ಶಿಶುಮಂದಿರದಲ್ಲಿ ಸಂಕ್ರಾತಿ ಹಬ್ಬ ಆಚರಣೆ

0

ಉಪ್ಪಿನಂಗಡಿ: ಸಂಕ್ರಾಂತಿ ಹಬ್ಬವೆನ್ನುವುದು ಪ್ರಕೃತಿಯೊಡನೆ ಮಾನವನ ನಂಟನ್ನು ಬೆಸೆಯುವ ಹಬ್ಬವಾಗಿದ್ದು, ಅನ್ನ ನೀಡುವ ಭೂಮಿಯ ಬಗ್ಗೆ ಹಾಗೂ ದೇವನಿತ್ತ ಪ್ರಾಕೃತಿಕ ಕೊಡುಗೆಗೆಳ ಮಹತ್ವವನ್ನು ಅರ್ಥೈಸುವ ಕಾರ್ಯ ಸಂಕ್ರಾಂತಿ ಹಬ್ಬದ ಆಚರಣೆಯಲ್ಲಡಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹರಿರಾಮಚಂದ್ರ ಹೇಳಿದರು.


ಉಪ್ಪಿನಂಗಡಿಯ ವೇದಶಂಕರ ನಗರದ ಶ್ರೀ ಮಾಧವ ಶಿಶುಮಂದಿರದಲ್ಲಿ ಆಯೋಜಿಸಲ್ಪಟ್ಟ ಸಂಕ್ರ್ರಾಂತಿ ಹಬ್ಬದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಅಧ್ಯಕ್ಷತೆ ವಹಿಸಿದ್ದ ಶಿಶು ಮಂದಿರದ ಪೋಷಕರ ಸಂಘದ ಅಧ್ಯಕ್ಷೆ ಶ್ರೀದೇವಿ ಗೌತಮ್ ಮಾತನಾಡಿ, ಸೂರ್ಯ ಚಲನೆಯ ಪಥ ಬದಲಾವಣೆಯೊಂದಿಗೆ ಪ್ರಕೃತಿಯಲ್ಲಿಯೂ ಮಹತ್ತರ ಬದಲಾವಣೆ ಕಾಣಲಾಗುತ್ತಿದೆ. ಈ ಸಂಧರ್ಭದಲ್ಲಿ ದೇಹದ ಆರೋಗ್ಯ ರಕ್ಷಣೆಗಾಗಿ ಎಳ್ಳು ಬೆಲ್ಲವನ್ನು ಸೇವಿಸುವ ಕ್ರಮವನ್ನು ಹಿರಿಯರು ಅನಾದಿಕಾಲದಿಂದಲೂ ನಡೆಸುತ್ತಾ ಬಂದಿದ್ದಾರೆ ಎಂದರು.


ಕಾರ್ಯಕ್ರಮದಲ್ಲಿ ಶಿಶು ಮಂದಿರದ ಆಡಳಿತ ಮಂಡಳಿ ಸದಸ್ಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಜಯಶ್ರೀ ಜನಾರ್ದನ್, ಪೋಷಕರ ಸಂಘದ ಉಪಾಧ್ಯಕ್ಷೆ ಭವ್ಯ, ಕಾರ್ಯದರ್ಶಿ ಲಲಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಶು ಮಂದಿರದ ಮಾತಾಜಿಗಳಾದ ಚೈತ್ರಾ, ಕಾಂತಿಮಣಿ, ಚಂದ್ರಾವತಿ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here