ಹಾಸನದಲ್ಲಿ ಸ್ನೇಹಿತರಿಂದಲೇ ಯುವಕನ ಕೊಲೆ :ಶಿರಾಡಿ ಘಾಟ್‌ನಲ್ಲಿ ಶವ ಪತ್ತೆ

0

ನೆಲ್ಯಾಡಿ: ತಾವು ಮಾಡಿದ ಕಳ್ಳತನ ಕೃತ್ಯಗಳು ಗೊತ್ತಿದ್ದವು ಎಂಬ ಕಾರಣಕ್ಕೆ ಹಾಸನ ತಾಲೂಕಿನ ಹರಳಹಳ್ಳಿಯ ಯುವಕನೊಬ್ಬನನ್ನು ಆತನ ಸ್ನೇಹಿತರೇ ಕೊಲೆಗೈದು ಗುಂಡ್ಯ ಸಮೀಪದ ಶಿರಾಡಿ ಘಾಟ್‌ನ ಪ್ರಪಾತಕ್ಕೆ ಎಸೆದಿದ್ದು ಹಾಸನ ಪೊಲೀಸರು ಜ.13ರಂದು ಶವವನ್ನು ಮೇಲೆತ್ತಿದ್ದಾರೆ.


ಹರಳಹಳ್ಳಿಯ ಶಿವಕುಮಾರ್(34ವ.)ಕೊಲೆಯಾದ ಯುವಕ. ಅದೇ ಗ್ರಾಮದ ಶರತ್ ಹಾಗೂ ಪ್ರತಾಪ್ ಕೊಲೆ ಆರೋಪಿಗಳಾಗಿದ್ದಾರೆ. ಆರೋಪಿಗಳು ಕುರಿ ಹಾಗೂ ಹಸು ಕಳವು ಮಾಡಿದ್ದರು. ಈ ಕೃತ್ಯದ ಬಗ್ಗೆ ಅವರ ಸ್ನೇಹಿತ ಶಿವಕುಮಾರ್‌ಗೆ ಗೊತ್ತಿತ್ತು. ಆತ ಈ ಬಗ್ಗೆ ಯಾರಿಗಾದರೂ ಹೇಳಿದರೆ ಸಮಸ್ಯೆಗೆ ಸಿಲುಕಬೇಕಾಗುತ್ತದೆ ಎಂಬ ಅನುಮಾನದಿಂದ ಆರೋಪಿಗಳು ಈ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಹೈದರಾಬಾದ್‌ನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಿವಕುಮಾರ್‌ನನ್ನು ಹರಳಹಳ್ಳಿಗೆ ಕರೆಸಿಕೊಂಡಿದ್ದ ಶರತ್ ಹಾಗೂ ಪ್ರತಾಪ್, ಜ.10ರಂದು ಮಧ್ಯಾಹ್ನ ಆತನನ್ನು ಮನೆಯಿಂದ ಹೊರಗೆ ಕರೆದೊಯ್ದಿದ್ದರು. ಆತನಿಗೆ ಕಂಠಪೂರ್ತಿ ಕುಡಿಸಿ, ನಿತ್ರಾಣಗೊಂಡ ನಂತರ ಆತನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ನಂತರ ಆರೋಪಿಗಳು ಶವವನ್ನು ಶಿರಾಡಿ ಘಾಟ್ ರಸ್ತೆಯ ಗುಂಡ್ಯ ಸಮೀಪ ಎಸೆದಿದ್ದರು. ಈ ಕೃತ್ಯಕ್ಕೆ ದಿಲೀಪ್ ಎಂಬಾತನ ಸಹಾಯ ಪಡೆದಿದ್ದರು. ದಿಲೀಪ್ ನೀಡಿದ ಸುಳಿವು ಆಧರಿಸಿ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ಬಯಲಿಗೆ ಎಳೆದಿದ್ದಾರೆ.

LEAVE A REPLY

Please enter your comment!
Please enter your name here