ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರುಪಂಜ ಶ್ರೀದುರ್ಗಾ ಭಜನಾ ಮಂದಿರದ 22ನೇ ವಾರ್ಷಿಕೋತ್ಸವ ಹಾಗೂ ಗ್ರಾಮ ದೈವಗಳಾದ ಇರುವೆರ್ ಉಳ್ಳಾಕುಲು ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವದ ಆಮಂತ್ರಣ ಪತ್ರಿಕೆಯು ಜ.12ರಂದು ಬಿಡುಗಡೆಗೊಂಡಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಲ್ಕೋಟೆ ಕಿಟ್ಟಣ್ಣ ರೈ, ಶ್ರೀ ದುರ್ಗಾ ಸೇವಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಗೌಡ ಗೆಣಸಿನಕುಮೇರು ಹಾಗೂ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ರವೀಂದ್ರನಾಥ ಕಲ್ಲೂರಾಯರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಶ್ರೀದುರ್ಗಾ ಸೇವಾ ಸಮಿತಿ ಕಾರ್ಯದರ್ಶಿ ಜಗದೀಶ್ ಪೂಜಾರಿ ವಳತ್ತಡ್ಕ, ಕೋಶಾಧಿಕಾರಿ ನವೀನ್ ಕುಮಾರ್ ಜಿ.ಟಿ., ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಗಂಗಾಧರ ರೈ ಕಲ್ಕೋಟೆ, ಕೋಶಾಧಿಕಾರಿ ಜಿ.ಟಿ. ನಾರಾಯಣ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ನಾಯ್ಕ ಜಂಗಮುಗೇರು, ಕಾರ್ಯದರ್ಶಿಗಳಾದ ಸುರೇಶ್ ನಾಯ್ಕ ದೇವಸ್ಯ, ಜಯಂತ್ ಕುಂಜೂರುಪಂಜ, ಕೋಶಾಧಿಕಾರಿ ರಮಾನಾಥ ಶೆಟ್ಟಿ ಮೇಗಿನಪಂಜ, ಉಪಾಧ್ಯಕ್ಷೆ ಉಮಾವತಿ ರೈ ಗೆಣಸಿನಕುಮೇರು, ದೈವ ನರ್ತಕ ನೇಮು ಪರವ, ಕೃಪಾನ್ ಕೋಟ್ಯಾನ್, ರಂಜಿತ್ ಶೆಟ್ಟಿ ದೇವಸ್ಯ, ಅಖಿಲಾ ಪ್ರಭು, ಕುಸುಮ ಟೀಚರ್, ಸೇವಾಪ್ರತಿನಿಧಿ ಆಶಾಲತಾ, ರಾಹಿತ್ಯ ಜೆ.ಎಸ್, ರಂಜಿತ್ ಸಾಮೆತಡ್ಕ, ಪ್ರಮೋದ್ ಕುಮಾರ್ ಜೈನ್, ಯಶೋಧರ ಆರಿಗ, ಚೇತನ್ ಕುಲಾಲ್, ಉಮೇಶ್ ಪೂಜಾರಿ, ರೋಹಿತ್ ಅಡಿಲ್, ಬಾಲಕೃಷ್ಣ ಪೂಜಾರಿ, ರಾಹಿತ್ಯ ಜೆ ಎಸ್, ಬಾಲಚಂದ್ರ ಕುಲಾಲ್ ಸೇರಿದಂತೆ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಫೆ.9ರಂದು ಬೆಳಿಗ್ಗೆ ದೇವಸ್ಯದಿಂದ ಕುಂಜೂರುಪಂಜ ಮಂದಿರಕ್ಕೆ ಹೊರೆಕಾಣಿಕೆ ಮೆರವಣಿಗೆ, ಸಂಜೆ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, ವಿವಿಧ ವೈದಿಕ, ತಾಂತ್ರಿಕ ಕಾರ್ಯಕ್ರಮಗಳು, ಫೆ.10ರಂದು ಶ್ರೀದುರ್ಗಾ ಭಜನಾ ಮಂದಿರದ 22ನೇ ವಾರ್ಷಿಕೋತ್ಸವ, ಅರ್ಧ ಏಕಾಹ ಭಜನೆ, ಇರುವೆರ್ ಉಳ್ಳಾಕುಲು ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಸಂಜೆ ಧಾರ್ಮಿಕ ಸಭೆ, ರಾತ್ರಿ ಸಾಮೂಹಿಕ ದುರ್ಗಾಪೂಜೆ, ಫೆ.11ರಂದು ಬೆಳಿಗ್ಗೆ ಇರುವೆರ್ ಉಳ್ಳಾಕುಲು ದೈವಗಳ ನೇಮೋತ್ಸವ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.