ಕೆಯ್ಯೂರು; ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಕೆಯ್ಯೂರು ಇದರ ವತಿಯಿಂದ ಕೆಪಿಎಲ್ ಸೀಸನ್ 4 ಕ್ರಿಕೆಟ್ ಪಂದ್ಯಾಟ ಜ.18 ರಿಂದ19 ವರೆಗೆ ಕೆಪಿಎಸ್ ಪ್ರಾಥಮಿಕ ವಿಭಾಗ ಕೆಯ್ಯೂರು ವಠಾರದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಎನ್ ದಿವಾಕರ ರೈ ಸಣಂಗಳ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ತೆಂಗಿನಕಾಯಿ ಹೊಡೆಯುವುದರ ಮೂಲಕ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕೆಯ್ಯೂರು ಗ್ರಾ.ಪಂ. ಸದಸ್ಯ ಜಯಂತ ಪೂಜಾರಿ ಕೆಂಗುಡೇಲು, ಮೀನಾಕ್ಷಿ ವಿ ರೈ, ಮಾಜಿ ಅಧ್ಯಕ್ಷೆ ಜಯಂತಿ ಎಸ್ ಭಂಡಾರಿ ,ಕೆದಂಬಾಡಿ ಕೆಯ್ಯೂರು ಸಿ.ಎ ಬ್ಯಾಂಕ್ ನಿರ್ದೇಶಕ ರಿತೇಶ್ ಪಾಟಳಿ ಮೆರ್ಲ, ಅರಣ್ಯ ಇಲಾಖೆ ದೀಪಕ್ ಕೆ ಎಸ್, ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಕುಮಾರ್ ರೈ, ಗೌರವ ಉಪಸ್ಥಿತಿಯಲ್ಲಿ ಹರಿಪ್ರಸಾದ್ ರೈ ಗೋಳ್ತಿಲ, ಸುಬ್ರಹ್ಮಣ್ಯ ರೈ ಶೇಡಿ -ಮಠ , ದೀಕ್ಷಿತ್ ರೈ ಇಳಂತಾಜೆ, ಕಿಶೋರ್ ಭಟ್ ಅರ್ತ್ಯಡ್ಕ, ಬೇಬಿ ಜೋಸೆಫ್ ಸಣಂಗಳ, ಸುಬ್ರಾಯ ಭಟ್ ಪಲತಡ್ಕ, ಶಶಿಧರ ಆಚಾರ್ಯ ಮಾಡಾವು, ಯೂಸುಫ್ ಬೂಸ್ತಾನ್ ಕೆಯ್ಯೂರು, ಅಬ್ಬಾಸ್ ಸಂತೋಷ ನಗರ, ದಿವಾಕರ ಪೂಜಾರಿ ಪಲ್ಲತಡ್ಕ, ಹರಿಪ್ರಸಾದ್ ಭಟ್ ನೂಜಾಜೆ, ಸುರೇಶ್ ಪೂಜಾರಿ ಕಣಿಯಾರು, ರಮೇಶ್ ರೈ ತಿಂಗಳಾಡಿ, ಹರೀಶ್ ಶೆಟ್ಟಿ ಕೆಯ್ಯೂರು, ಹರೀಶ್ ಕಣಿಯಾರು, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಂಡದ ನಾಯಕರಾದ ಬ್ರಿಜೇಶ್ ರೈ ಸಣಂಗಳ, ವಿನಯ್ ರೈ ಕೋರಿಕ್ಕಾರ್, ಪ್ರದೀಪ್ ರೈ ಸಣಂಗಳ, ಮನೋಜ್ ರೈ ಮಾಡಾವು, ದೀಪಕ್ ರೈ ಮಾಡಾವು, ಸತೀಶ್ ರೈ ದೇವಿನಗರ, ಜಯಂತ ಕೊಲ್ಯ ಪೆರುವಾಜೆ, ಶರತ್ ಕುಮಾರ್ ಮಾಡಾವು, ಪ್ರಸನ್ನ ಕುಮಾರ್ ಎಂ.ಪಿ ಮಾಡಾವು, ಅನೀಸ್ ಸಂತೋಷ್ ನಗರ, ನಾಸಿರ್ ಮಾಡಾವು, ಅಶ್ವಥ್ ಕೆ.ಎಸ್ ಕಣಿಯಾರು, ಅಶೋಕ್ ಕೆ.ಎಸ್ ಕಣಿಯಾರು, ರವೀಂದ್ರ ಕೆ.ಎಸ್ ಕಣಿಯಾರು, ಕೃಷ್ಣ ಪ್ರಸಾದ್ ರೈ ಕಣಿಯಾರು, ವೀನಿತ್ ರೈ ದೇರ್ಲ, ಶರತ್ ಕುಮಾರ್ ರೈ ದೇರ್ಲ, ದಿನೇಶ್ ಕೆ.ಎಸ್, ದೀಪಕ್ ಕೆ.ಎಸ್, ದಿಲೀಪ್ ಕೆ.ಎಸ್, ಕ್ಲಬ್ ನ ವತಿಯಿಂದ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕ್ಲಬ್ ನ ಗೌರವ ಸಲಹೆಗಾರ ತಾರಾನಾಥ ರೈ ಕೋಡಂಬು ಸ್ವಾಗತಿಸಿ, ವಂದಿಸಿದರು.