ಪುತ್ತೂರು: ಸಿರಿ ಕಡಮಜಲು ಕೃಷೀ ಕ್ಷೇತ್ರಕ್ಕೆ ಜ.1ರಂದು ಸಾಹಿತಿಗಳು, ನಿವೃತ ಪ್ರಾದ್ಯಾಪಕರಾದ ಡಾ| ನರೇಂದ್ರ ರೈದೇರ್ಲ ರವರು ಭೇಟಿ ನೀಡಿದರು.
ಈ ಸಂದರ್ಭ ಡಾ| ನರೇಂದ್ರ ರೈ ದೇರ್ಲ ರವರಿಗೆ ಶಾಲು, ಫಲ ವಸ್ತು, ಬೆಳೆಸಿದ ತರಕಾರಿಗಳನ್ನು ನೀಡಿ ನಿವೃತ ಜೀವನಕ್ಕೆ ಕಡಮಜಲು ಸುಭಾಷ್ ರೈ ರವರು ಶುಭಹಾರೈಸಿದರು.
ಕಡಮಜಲುರವರು ತನ್ನ 75ನೇ ವರ್ಷದ ಚಿರಣತಿ ಸಂದರ್ಭ ಸಾಹಿತ್ಯ ಲೋಕಕ್ಕೆ ಅರ್ಪಿಸುವ ಸಾಹಿತ್ಯ ಕೃತಿ ‘ಪ್ರೀತಿಯಿಂದ ಪ್ರೀತಿಗೆ ‘ ಕೃತಿಗೆ ದೇರ್ಲರವರು ಬರೆದ ಶುಭ ಸಂದೇಶವನ್ನು ಸಮರ್ಪಿಸಿದರು. ಶುಭ ಸಂದೇಶದಲ್ಲಿ ಸಿರಿ ಕಡಮಜಲು ಕೃಷಿ ಕ್ಷೇತ್ರದ ಸಸ್ಯ ಚಾಲನೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಪ್ರೀತಿ ಸುಭಾಷ್ ರೈ ಯವರು ಶುಭ ಹಾರೈಸಿದರು.