ನಿಡ್ಪಳ್ಳಿ: ಡಾ. ಗಂಗೂಬಾಯಿ ಹಾನಗಲ್ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ನಡೆದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಸಾಂದೀಪನಿ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಕೆ.ಅವನಿ ಬೋರ್ಕರ್ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಶ್ರೀ ಶಾರದಾ ಕಲಾಕೇಂದ್ರ ದರ್ಬೆ ಪುತ್ತೂರು ಇಲ್ಲಿನ ವಿದ್ವಾನ್ ಸುದರ್ಶನ್ ಎಂ.ಎಲ್.ಭಟ್ ಇವರ ಶಿಷ್ಯೆಯಾಗಿರುವ ಅವನಿ ನಿಡ್ಪಳ್ಳಿ ಗ್ರಾಮದ ಕತ್ತಲೆಕಾನ ಅನಂತ ಬೋರ್ಕರ್ ಮತ್ತು ಚಿತ್ರಾ ಬೋರ್ಕರ್ ದಂಪತಿಯ ಪುತ್ರಿ.