ನಿಡ್ಪಳ್ಳಿ; ದ.ಕ.ಜಿ.ಪಂ.ಉನ್ನತ ಹಿರಿಯ ಪ್ರಾಥಮಿಕ ಶಾಲೆ ಪೇರಲ್ತಡ್ಕ ಇಲ್ಲಿಯ 2009-10 ನೇ ಸಾಲಿನ ಎಂಟನೇ ತರಗತಿ ವಿದ್ಯಾರ್ಥಿಗಳ ಸ್ನೇಹ ಸಂಗಮ ಕಾರ್ಯಕ್ರಮ ಜ.15 ರಂದು ನಡೆಯಿತು.
ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ನೀಡಲಾಯಿತು.ಅಲ್ಲದೆ ಅವರ ಗುರುಗಳಿಗೆ ಸನ್ಮಾನಿಸಿ, ಗೌರವಿಸಿದರು.ಸುಮಾರು 10,000 ಮೌಲ್ಯದ ಮಿಕ್ಸಿಯೊಂದನ್ನು ತಮ್ಮ ಸವಿ ನೆನಪಿಗಾಗಿ ಕೊಡುಗೆಯಾಗಿ ನೀಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಹನೀಫ್.ಪಿ, ಉಪಾಧ್ಯಕ್ಷೆ ತುಳಸಿ, ನಿವೃತ್ತ ಮುಖ್ಯ ಗುರು ಹುಕ್ರಪ್ಪ ನಾಯ್ಕ, ಶಾಲಾ ಮುಖ್ಯ ಗುರು ಜಾನಕಿ, ವಿದ್ಯಾರ್ಥಿ ವೃಂದದವರು ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.