ಜ.20-23: ಕೊಳ್ತಿಗೆ ಬಾಯಂಬಾಡಿ ಶ್ರೀಷಣ್ಮುಖ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

0

ಪುತ್ತೂರು: ಕೊಳ್ತಿಗೆ ಗ್ರಾಮದ ಬಾಯಂಬಾಡಿ ಶ್ರೀಷಣ್ಮುಖ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಜ.20ರಿಂದ 23ರವರೆಗೆ ನಡೆಯಲಿದೆ.
ಜ.20ರಂದು ಬೆಳಿಗ್ಗೆ 9ರಿಂದ ಉಗ್ರಾಣ ಮುಹೂರ್ತ, ಹಸಿರು ಹೊರೆಕಾಣಿಕೆ ಸಮರ್ಪಣೆ, ಜ.21ರಂದು ಬೆಳಿಗ್ಗೆ 9ರಿಂದ ಆಶ್ಲೇಷ ಬಲಿ ಪೂಜೆ, ನಾಗದೇವರಿಗೆ ಕಲಶಾಭಿಷೇಕ, ತಂಬಿಲ ಸೇವೆ, ಶ್ರೀಮಹಾವಿಷ್ಣು ಆರಾಧನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದುಗ್ಗಳದಿಂದ ಶ್ರೀಇರ್ವೆರು ಉಳ್ಳಾಕ್ಲು ದೈವದ ಭಂಡಾರ ಮತ್ತು ಶ್ರೀರಾಜನ್ ದೈವ(ಶಿರಾಡಿ)ದ ಭಂಡಾರ ಶ್ರಿದೇವರ ಸನ್ನಿಧಿಗೆ ಆಗಮಿಸುವುದು. ರಾತ್ರಿ ಮಹಾಪೂಜೆ, ಶ್ರೀದೇವರ ಬಲಿ ಹೊರಟು ಉತ್ಸವ, ಪಲ್ಲಕ್ಕಿ ಉತ್ಸವ, ರಥೋತ್ಸವ, ಕಟ್ಟೆಪೂಜೆ, ಅಶ್ವತ್ಥಕಟ್ಟೆ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಜ.22ರಂದು ಬೆಳಿಗ್ಗೆ 8ರಿಂದ ಮಹಾಗಣಪತಿ ಹೋಮ, ಕಲಶ ಪೂಜೆ, ಶ್ರೀದೇವರ ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ರಥದಲ್ಲಿ ಶ್ರೀದೇವರ ಉತ್ಸವ, ದರ್ಶನಬಲಿ ಉತ್ಸವ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಶ್ರೀದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಇರ್ವೆರು ಉಳ್ಳಾಕ್ಲುರವರ ಭಂಡಾರ ದುಗ್ಗಳಕ್ಕೆ ನಿರ್ಗಮನ, ರಾತ್ರಿ ರಂಗಪೂಜೆ, ವ್ಯಾಘ್ರಚಾಮುಂಡಿ, ವಾರಾಹಿ ದೈವದ ನೇಮ, ಕಾಣಿಕೆ ಹರಕೆ ಸಮರ್ಪಣೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಜ.23ರಂದು ಬೆಳಿಗ್ಗೆ 6ರಿಂದ ಶ್ರೀರಕ್ತೇಶ್ವರಿ, ಧೂಮ್ರ-ಧೂಮಾವತಿ ಮತ್ತು ಶಿರಾಡಿ ದೈವಗಳ ನೇಮ ನಡಾವರಿ, ಕಾಣಿಕೆ ಹರಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ:
ಜ.20ರಂದು ಸಂಜೆ 6.30ರಿಂದ ನಿರಂತರ ಯೋಗ ಕೇಂದ್ರ ಪೆರ್ಲಂಪಾಡಿ ಇದರ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ, ಸಂಜೆ 7ರಿಂದ ವೈಷ್ಣವೀ ನಾಟ್ಯಾಲಯ ಪುತ್ತೂರು ಇದರ ಬೆಳ್ಳಾರೆ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಾರ್ಪಣಂ, ಜ.21ರಂದು ಬೆಳಿಗ್ಗೆ 10ರಿಂದ ಪೆರ್ಲಂಪಾಡಿ ಶ್ರೀಷಣ್ಮುಖ ಭಜನಾ ಮಂಡಳಿ ಮತ್ತು ಆದಿಶಕ್ತಿ ಭಜನಾ ತಂಡ ಕಲಾಯಿರವರಿಂದ ಭಜನಾ ಕಾರ್ಯಕ್ರಮ, ಸಂಜೆ 6ರಿಂದ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 10.30ರಿಂದ ಬೊಳ್ಳಿ ಬೊಲ್ಪುದ ಬಂಗಾರ್ ಕಲಾವಿದೆರ್ ಮಾಲೆತ್ತೋಡಿ ಅಭಿನಯದ ತುಳು ಸಾಮಾಜಿಕ ಹಾಸ್ಯಮಯ ನಾಟಕ ಬಂಗಾರ್‌ದ ಬದ್ಕ್ ನಡೆಯಲಿದೆ.

LEAVE A REPLY

Please enter your comment!
Please enter your name here