ಪುತ್ತೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಸೃಷ್ಠಿ ಎಂ ಸಾಲಿಯಾನ್ರವರು ಶೇ.87 ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ .
ಇವರು ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಗುರುಗಳಾದ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿ ಕಲಾ, ಹಾಗೂ ವಿದ್ವಾನ್ ಗಿರೀಶ್ ಕುಮಾರ್ ಇವರ ಶಿಷ್ಯಯಾಗಿದ್ದು, ವಿವೇಕಾನಂದ ಸೆಂಟ್ರಲ್ ಶಾಲೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸೃಷ್ಠಿಯವರು ಕಬಕ ಗ್ರಾಮದ ಶ್ರೀನಿವಾಸಪುರದ ಮಹೇಶ್ ಪಿದಪಟ್ಲ ಹಾಗೂ ಸುಜಾತ ಮಹೇಶ್ರವರ ಪುತ್ರಿಯಾಗಿದ್ದಾರೆ.