ಪುತ್ತೂರು: ಕರ್ನಾಟಕ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ಪರಿಕರಗಳ ವಿಶ್ವವಿದ್ಯಾಲಯ ಮೈಸೂರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ವೈಷ್ಣವಿ.ಕೆ ಶೇ. 87 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವೈಷ್ಣವಿ.ಕೆ ಪುತ್ತೂರಿನ ನಾಟ್ಯ ರಂಗ ನೃತ್ಯ ಕಲಾ ಶಾಲೆಯ ಗುರುಗಳಾದ ಮಂಜುಳಾ ಸುಬ್ರಹ್ಮಣ್ಯ ಅವರ ಶಿಷ್ಯೆ. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿರುವ ಈಕೆ ಮಹೇಶ್ ಪ್ರಸಾದ್ ಹೋಟೆಲ್ ನ ಮಾಲಕರಾದ ಕೃಷ್ಣ ಕುಮಾರ್ ಮತ್ತು ಮಧುರ ಕೃಷ್ಣ ಕುಮಾರ್ ಇವರ ಪುತ್ರಿ.