ಪಡುಮಲೆ: ದ.ಕ.ಜಿ.ಪಂ.ಹಿ. ಪ್ರಾ. ಶಾಲೆ ಪಡುಮಲೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆಯಾಗಿ ಸವಿತಾ ಕೆ. ಉಪಾಧ್ಯಕ್ಷರಾಗಿ ಸೂರ್ಯಪ್ರಕಾಶ್ ಪಿ.ವೈ ನೇಮಕಗೊಂಡರು.
ದ.ಕ.ಜಿ.ಪಂ.ಹಿ.ಪ್ರಾ. ಶಾಲೆ, ಪಡುಮಲೆ ಇದರ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ಸವಿತಾ ಎ ಹಾಗೂ ಉಪಾಧ್ಯಕ್ಷರಾಗಿ ಸೂರ್ಯಪ್ರಕಾಶ್ ಆಯ್ಕೆಯಾದರು.
ಬಡಗನ್ನೂರು ಗ್ರಾ.ಪಂ. ಸದಸ್ಯರಾದ ರವಿರಾಜ್ ರೈ ಸಜಂಕಾಡಿ ಮತ್ತು ಕಲಾವತಿ ಎಸ್. ಗೌಡ ಪಟ್ಲಡ್ಕ ಇವರ ಉಪಸ್ಥಿತಿಯಲ್ಲಿ ಇತ್ತೀಚೆಗೆ ನಡೆದ ಪೋಷಕರ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಪೋಷಕರ ಪ್ರತಿನಿಧಿಗಳಾಗಿ ಸರೋಜಿನಿ, ಅನಿತಾ, ಚಂದ್ರಾವತಿ ಎಂ., ಬೇಬಿ, ಅರವಿಂದ, ವೇದಾವತಿ, ಸವಿತಾ ಪುಂಡಿಕಾಯಿ, ಲೀಲಾವತಿ ಎ., ಜ್ಯೋತಿ, ಪ್ರೇಮ, ಸವಿತಾ ಪಳನೀರು, ಜಯಂತಿ, ಗ್ರೆಟಾ ಡಿಸೋಜಾ, ಸುಮಲತಾ, ಚಂದ್ರಾವತಿ ಬಿ., ತೇಜಲಕ್ಷ್ಮಿ ಆಯ್ಕೆಯಾದರು.
ಶಾಲಾ ಪ್ರಭಾರ ಮುಖ್ಯಗುರುಗಳಾದ ಪರಮೇಶ್ವರ ಎ., ಇಲಾಖಾ ನಿಯಮಗಳನ್ನು ಪರಿಚಯಿಸಿದರು. ಎಸ್.ಡಿ.ಎಂ.ಸಿಯ ನಿಕಟ ಪೂರ್ವ ಅಧ್ಯಕ್ಷರಾದ ತೇಜಲಕ್ಷ್ಮಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಶುಭಹಾರೈಸಿದರು. ಸಹಶಿಕ್ಷಕಿ ಅರುಣಕುಮಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಸೌಮ್ಯ ಕೆ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿಲಾಸಿನಿ ವಂದಿಸಿದರು.