ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆ: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಥಮ

0

ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಕಛೇರಿ ಮಂಗಳೂರು ಇಲ್ಲಿ ಶಿಕ್ಷಣ ಗುಣಮಟ್ಟ ಸುಧಾರಣೆ ಕಾರ್ಯಕ್ರಮದ ಅಡಿಯಲ್ಲಿ ಶ್ರೀ ಆಲೂರು ವೆಂಕಟರಾವ್ ಭಾಷಾ ಕೌಶಲ್ಯ ಕೇಂದ್ರ ಅನುಮೋದಿತ ಕ್ರಿಯಾ ಯೋಜನೆಯ ಪಠ್ಯಪುಸ್ತಕಾಧಾರಿತ ನಾಟಕ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗ ಮತ್ತು ಪ್ರೌಢ ವಿಭಾಗದ ಮಕ್ಕಳ ತಂಡ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.

7ನೇ ತರಗತಿಯ ಪಠ್ಯಪೂರಕ ಗದ್ಯಭಾಗ [ಡಾ.ಎಚ್.ಎಸ್ ಅನುಪಮ] ಸಾವಿತ್ರಿಬಾಯಿ ಫುಲೆ ನಾಟಕ ಪಾತ್ರದಾರಿಗಳು ಶಾಲಾ ವಿದ್ಯಾರ್ಥಿಗಳಾದ ವೈಷ್ಣವಿ, ಗಾನವಿ, ತನಿಷಾ, ವೈಭವ್, ಶ್ರೀಕೃಷ್ಣ ಮತ್ತು ಸೃಜನ್. ಪ್ರೌಢವಿಭಾಗದ 10ನೇ ತರಗತಿಯ ಪಠ್ಯಪೂರಕ ಗದ್ಯಭಾಗ [ಜಿ.ಎಸ್.ಚಿದಾನಂದ ಮೂರ್ತಿ] ಭಗತ್ ಸಿಂಗ್ ನಾಟಕದ ಪಾತ್ರಧಾರಿಗಳು ಶಾಲಾ ವಿದ್ಯಾರ್ಥಿಗಳಾದ ದರ್ಶಿನಿ, ಶಿವಪ್ರಕಾಶ್, ವಚನ್, ಸಾಯೀಶ್ವರಿ, ಶ್ರೀನಿಧಿ, ವಿಶ್ಮಿತಾ ಆಗಿರುತ್ತಾರೆ. ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ ಈ ಎರಡೂ ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ.

LEAVE A REPLY

Please enter your comment!
Please enter your name here