ಪತ್ರಕರ್ತ ಕುರಿಯ ವಾಸುದೇವ ಹೊಳ್ಳರವರ ಸಹೋದರಿ ಜಯಲಕ್ಷ್ಮಿ ತೋಡಿನ್ನಾಯ ನಿಧನ

0

ಪುತ್ತೂರು : ಮಂಜೇಶ್ವರದ ಅಡಕಳಕಟ್ಟೆ ನಿವಾಸಿಯಾಗಿದ್ದ ಪಾಕಶಾಸ್ತ್ರಜ್ಞ ದಿ. ವೆಂಕಟರಮಣ ತೋಡಿನ್ನಾಯರವರ ಪತ್ನಿ ಜಯಲಕ್ಷ್ಮೀ ತೋಡಿನ್ನಾಯ (83 ವ.) ಅವರು ಜ.19ರಂದು ಬೆಂಗಳೂರಿನಲ್ಲಿರುವ ಪುತ್ರನ ಮನೆಯಲ್ಲಿ ನಿಧನರಾಗಿದ್ದಾರೆ.


ಮೃತರು ಪುತ್ರರಾದ ಹಲವು ಕಂಪನಿಗಳಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸಿ ನಿವೃತ್ತರಾದ ಬಾಲಕೃಷ್ಣ ತೋಡಿನ್ನಾಯ, ಗೊರ್ಲಾನ್ ಇಂಡಿಯಾ ಸ್ವಿಚ್‌ಗೇರ್ಸ್ ಪ್ರೈ. ಲಿನ ಹಿರಿಯ ಪ್ರಾದೇಶಿಕ ಪ್ರಬಂಧಕ ರವಿಶಂಕರ ತೋಡಿನ್ನಾಯ ಬಿ.,

ಪುತ್ರಿಯರಾದ ಶ್ರೀ ವಾಣಿ ವಿಜಯ ಹೈಸ್ಕೂಲ್ ಕೊಡ್ಲಮೊಗರು ಇದರ ನಿವೃತ್ತ ಮುಖ್ಯಶಿಕ್ಷಕಿ ಭಾರತಿ, ಬೆಂಗಳೂರಿನ ವೈದ್ಯೆ ಡಾ. ಸತ್ಯವತಿ, ಸಹೋದರರಾದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ವಾಸುದೇವ ಹೊಳ್ಳ ಕುರಿಯ ಹಾಗೂ ಬೆಂಗಳೂರಿನಲ್ಲಿರುವ ಸುಬ್ರಹ್ಮಣ್ಯ ಮಠದ ಸುಂದರ ರಾಮ ಹೊಳ್ಳ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here