ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಿಗೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಭಿನಂದನೆ

0

ಪುತ್ತೂರು: ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಸತತ 3 ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ್ಚಂದ್ರ ರೈ ಕೈಕಾರರವರಿಗೆ  ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪರವಾಗಿ ಯೋಜನಾಧಿಕಾರಿ ಶಶಿಧರ ಎಂ ರವರು ಗೌರವಿಸಿದರು.

ಸಂಘದ ಕಾರ್ಯನಿರ್ವಹಣಾ ಅಧಿಕಾರಿಯಾದ ಭವಾನಿಯವರನ್ನು ಕೂಡ ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು .ಈ ಸಂದರ್ಭದಲ್ಲಿ ಯೋಜನೆಯ ಕುಂಬ್ರ ಕಾರ್ಯಕ್ಷೇತ್ರದ  ವಲಯಾಧ್ಯಕ್ಷರಾದ ಎಸ್ ಮಾಧವ ರೈ ಕುಂಬ್ರ, ವಲಯ ಮೇಲ್ವಿಚಾರಕರಾದ  ಮೋಹಿನಿ ಎಸ್ ಗೌಡ, ಜ್ಞಾನ ವಿಕಾಸ ತಾಲೂಕು ಸಮನ್ವಯಾಧಿಕಾರಿ  ಕಾವ್ಯ ಶ್ರೀ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here