ಅವಕಾಶವಾದಿಗಳ ಷಡ್ಯಂತ್ರಕ್ಕೆ ಬಲಿಯಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಪುತ್ತೂರು ಟೌನ್ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧೆ – ಸದಾಶಿವ ಪೈ

0

ಪುತ್ತೂರು: ಕಳೆದ 20 ವರ್ಷಗಳಿಂದ ನಿರ್ದೇಶಕನಾಗಿ ಸೇವೆ ಸಲ್ಲಿಸುವ ಮೂಲಕ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್‌ನ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಈಗ ಅವಕಾಶವಾದಿಗಳ ಷಡ್ಯಂತ್ರಕ್ಕೆ ನಾನು ಬಲಿಯಾಗಿದ್ದೇನೆ. ಈ ಕಾರಣದಿಂದ ಈ ಭಾರಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ನನ್ನ ಕ್ರಮ ಸಂಖ್ಯೆ 11 ಆಗಿದ್ದು ತೆಂಗಿನ ಕಾಯಿ ಚಿಹ್ನೆಗೆ ಮತ ನೀಡುವಂತೆ ಪುತ್ತೂರು ಟೌನ್ ಬ್ಯಾಂಕ್‌ನ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಸದಾಶಿವ ಪೈ ಅವರು ಪತ್ರಿಕಾಗೋಷ್ಟಿಯಲ್ಲಿ ವಿನಂತಿಸಿದ್ದಾರೆ.


ಕೆಲವೊಂದು ಮಾಧ್ಯಮಗಳಲ್ಲಿ ಸಹಕಾರ ಭಾರತಿಯಿಂದ ನನಗೆ ಸೀಟ್ ಸಿಗಲಿಲ್ಲ ಎಂದು ವರದಿಯಾಗಿತ್ತು. ಇದು ಸತ್ಯಕ್ಕೆ ದೂರವಾದ ವಿಚಾರ. ನನ್ನ ಸ್ಥಾನಕ್ಕೆ ಒಂದು ವರ್ಷದ ಮೊದಲೇ ಇಬ್ಬರು ಹೆಸರನ್ನು ಕೊಟ್ಟಂತೆ ಅವರಿಗೆ ಅವಕಾಶ ನೀಡಲಾಗಿದೆ. ನಾನು ಈಗಲೂ ಸಹಕಾರ ಭಾರತಿಯ ಸದಸ್ಯನಾಗಿದ್ದೇನೆ. ಈ ಬಾರಿ ನಾನು ಅವಕಾಶ ಕೇಳಿಲ್ಲ. ಸಹಕಾರ ಭಾರತಿಯಿಂದ ನಾಲ್ವರು ಹಿರಿಯರು ಬಿಟ್ಟರೆ ಉಳಿದೆಲ್ಲ ಹೊಸ ಮುಖಗಳೆಂದು ತಿಳಿಸಿದ್ದರು. ಆದರೆ 5ನೇ ಓರ್ವ ಹಿರಿಯ ವ್ಯಕ್ತಿಯನ್ನೂ ಸೇರಿಸಿರುವುದರಿಂದ ಪ್ರಮುಖರು ಮಾತಿಗೆ ತಪ್ಪಿದಂತಾಗಿದೆ. ಈ ಹಿಂದೆಯೂ ಬೇಕಾದಷ್ಟು ಅವಕಾಶ ಪಡೆದುಕೊಂಡವರಿಗೆ ಮತ್ತೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ನಾನು ಪಕ್ಷೇತರನಾಗಿ ಸ್ಪರ್ಧೆಗೆ ಇಳಿದಿದ್ದೇನೆ. ನಾಮಪತ್ರ ಸಲ್ಲಿಸಿದ ನಂತರ ಮಾಜಿ ಶಾಸಕ ಸಂಜೀವ ಮಠಂದೂರು, ನಗರ ಬಿಜೆಪಿ ಮಂಡಲ ಅಧ್ಯಕ್ಷ ಶಿವಕುಮಾರ್, ಶಶಿಕುಮಾರ್ ರೈ ಬಾಲ್ಯೊಟ್ಟು ಸಹಿತ ಕೆಲವರು ಮಾತುಕತೆಗೆ ಬಂದಿದ್ದರು. ನಿಮ್ಮನ್ನು ಕೋ ಆಪ್ಟ್ ಮಾಡಿಕೊಳ್ಳುತ್ತೇವೆ. ನಾಮಪತ್ರ ವಾಪಾಸು ಪಡೆಯಿರಿ ಎಂದರು. ಅವಕಾಶವಾದಿಗಳಿಗೂ ಸೀಟು ಕೊಡಬೇಡಿ. ನಾನು ವಾಪಾಸು ತೆಗೆದುಕೊಳ್ಳುವುದಾಗಿ ತಿಳಿಸಿದೆ. ಆದರೆ ಅದಕ್ಕೆ ಅವರು ಸ್ಪಂದಿಸಿಲ್ಲ. ಹಾಗಾಗಿ ನಾನು ಅವರ ಆಫರ್ ತಿರಸ್ಕರಿಸಿದ್ದೇನೆ ಎಂದು ಸದಾಶಿವ ಪೈ ಹೇಳಿದರು.


ನಾನು ಜನಸಂಘ ಕಾಲದಿಂದಲೂ ಬಿಜೆಪಿ:
ನಾನು ಕಾಂಗ್ರೆಸ್ ಪರ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಹಾಕುತ್ತಿದ್ದಾರೆ. ಆದರೆ ನಾನು ಜನಸಂಘದ ಕಾಲದಿಂದಲೂ ಬಿಜೆಪಿ. ಕಾಂಗ್ರೆಸ್ ಪರ ಅಲ್ಲ. ನಾಮಪತ್ರ ಹಾಕಿದ ಬಳಿಕ ಪುತ್ತೂರಿನ 5 ಮಂದಿ ಕಾಂಗ್ರೆಸ್ ಮುಖಂಡರು ಸಂಪರ್ಕಿಸಿದ್ದಾರೆ. ಆದರೆ ನಾನು ಅದಕ್ಕೆ ಒಪ್ಪಿಲ್ಲ. ನನ್ನದು ಸಹಕಾರ ಭಾರತಿಯಲ್ಲಿನ ಅವಕಾಶವಾದಿಗಳ ವಿರುದ್ದದ ಹೋರಾಟವೇ ಹೊರತು ಪಕ್ಷದ ವಿರುದ್ಧವಲ್ಲ. ನನ್ನ ನೇರ ತನವೇ ನನಗೆ ಅವಕಾಶ ಸಿಗದಿರಲು ಕಾರಣವಾಯಿತು. ಆದರೆ ಈ ನೇರತನವೇ ನನ್ನ ಗೆಲುವಿಗೆ ಕಾರಣವಾಗುತ್ತದೆ ಎಂದು ನಂಬಿದ್ದೇನೆ. ಮತದಾರರು ನನಗೆ ಮತ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here