ಪುತ್ತೂರು: ಕೋರ್ಟ್ ರಸ್ತೆ ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸಹಯೋಗದೊಂದಿಗೆ ಮೂಳೆ ಸಾಂದ್ರತೆ(BMD)ಯ ಉಚಿತ ತಪಾಸಣಾ ಶಿಬಿರವು ಜ.21 ರಂದು ನಡೆಯಿತು.
44 ಮಂದಿ ಮೂಳೆ ಸಾಂದ್ರತೆ, 30 ಮಂದಿ ಫಲಾನುಭವಿಗಳು ಮಧುಮೇಹ ಪರೀಕ್ಷೆಯಲ್ಲಿ ಪಾಲ್ಗೊಂಡು ಆಸ್ಪತ್ರೆ ವೈದ್ಯ ಡಾ.ಜೆ.ಸಿ ಅಡಿಗರವರು ಫಲಾನುಭವಿಗಳಿಗೆ ಸೂಕ್ತ ಚಿಕಿತ್ಸೆ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಪುತ್ತೂರು ಮಾಜಿ ಅಧ್ಯಕ್ಷ ಜೈರಾಜ್ ಭಂಡಾರಿ, ಸಮುದಾಯ ಸೇವಾ ನಿರ್ದೇಶಕ ರಾಜ್ ಗೋಪಾಲ್ ಬಲ್ಲಾಳ್, ಆಸ್ಪತ್ರೆ ಮ್ಯಾನೇಜರ್ ನೋಯಲ್ ಡಿ’ಸೋಜರವರು ಉಪಸ್ಥಿತರಿದ್ದರು.