ವಿಟ್ಲದಲ್ಲಿ ಟೋಪ್ಕೋ ಜ್ಯುವೆಲ್ಲರಿಯ ನವೀಕೃತ ಮಳಿಗೆ ಉದ್ಘಾಟನೆ

0
  • ಜನರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವ ಕೆಲಸವಾಗಲಿ: ಕುಂಬೋಲ್ ಸಯ್ಯದ್ ಕೆ.ಎಸ್. ಆಟಕೋಯ ತಂಙಳ್
  • ಪ್ರಾಮಾಣಿಕತೆಯಲ್ಲಿ ವ್ಯವಹಾರ ಮಾಡಿದಾಗ ಯಶಸ್ಸು ಸಾಧ್ಯ: ಒಡಿಯೂರು ಶ್ರೀ
  • ಇದೊಂದು ಸೌಹಾರ್ದ ಸಂದೇಶ ಸಾರಿದ ಕಾರ್ಯಕ್ರಮವಾಗಿದೆ: ಫಾದರ್ ಐವನ್ ಮೈಕಲ್ ರಾಡ್ರಿಗಸ್
  • ವಿಟ್ಲಕ್ಕೆ ಗೌರವ ತರುವ ಕೆಲಸ ಸಂಸ್ಥೆಯಿಂದಾಗಿದೆ: ಎಂ.ಎಸ್. ಮಹಮ್ಮದ್

ವಿಟ್ಲ: ಚಿನ್ನಾಭರಣ ವ್ಯವಹಾರದಲ್ಲಿ ಅನುಭವ ಹೊಂದಿದ ಜನರ ವಿಶ್ವಾಸನೀಯ ಸಂಸ್ಥೆ ಇದಾಗಿದೆ. ನವ ವಿನ್ಯಾಸದ ಆಭರಣಗಳ ಸಂಗ್ರಹವೇ ಇಲ್ಲಿದೆ. ಪೇಟೆ ಪಟ್ಟಣ ಬೆಳೆಯುತ್ತಿದ್ದಂತೆ ಅದಕ್ಕೆ ತಕ್ಕುದಾಗಿ ಸಂಸ್ಥೆಯ ಅಂದವನ್ನು ಮತ್ತಷ್ಟು ಹೆಚ್ಚಿಸುವುದು ಅನಿವಾರ್ಯವಾಗಿದೆ. ಚಿನ್ನಾಭರಣ ಮಳಿಗೆಯನ್ನು ನವೀಕರಿಸುವ ಮೂಲಕ ಜನರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವ ಕೆಲಸವಾಗಲಿ. ಜಾತಿ ಮತ ಧರ್ಮವಿಲ್ಲದೆ ಸಂಸ್ಥೆ ಮುನ್ನಡೆದರೆ ಯಶಸ್ಸು ಹೆಚ್ಚು. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಕುಂಬೋಲ್ ಸಯ್ಯದ್ ಕೆ.ಎಸ್. ಆಟಕೋಯ ತಂಙಳ್ ರವರು ಹೇಳಿದರು.

38 ವರ್ಷಗಳ ಇತಿಹಾಸ, ಸೇವಾ ಪರಂಪರೆ ಮತ್ತು ಪರಿಶುದ್ಧತೆಯ ಪ್ರತೀಕವಾಗಿರುವ ಟೋಪ್ಕೋ ಸಮೂಹ ಸಂಸ್ಥೆಗಳ ಟೋಪ್ಕೋ ಜ್ಯುವೆಲ್ಲರಿ ವಿಟ್ಲದ ಪುತ್ತೂರು ರಸ್ತೆಯ ಎಂಪಾಯರ್ ಮಾಲ್ ನಲ್ಲಿ ಪ್ರಾರಂಭವಾಗಿ 12 ವರ್ಷಗಳು ಕಳೆದಿದ್ದು, ಜ.೨೨ರಂದು ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿರವರು ಮಾತನಾಡಿ ಇದೊಂದು ಸಂಭ್ರಮ ಸಂತಸದ ಕ್ಷಣವಾಗಿದೆ. ಧರ್ಮ ಪ್ರಜ್ಞೆಯಿಂದ ನಡೆದಾಗ ಎಲ್ಲರ ಬದುಕು ಬಂಗಾರವಾಗುತ್ತದೆ. ಧರ್ಮ ಶ್ರದ್ದೇ ಇದ್ದಲ್ಲಿ ಶಾಂತಿ, ಸಮಾನತೆ, ಸೌಹಾರ್ದತೆ ಸಾಧ್ಯ. ವ್ಯಕ್ತಿಗೆ ವ್ಯಕ್ತಿತ್ವ ಸೇರಿದಾಗ ಬದುಕು ಹಸನಾಗುತ್ತದೆ‌. ಪ್ರಾಮಾಣಿಕತೆಯಲ್ಲಿ ವ್ಯವಹಾರ ಮಾಡಿದಾಗ ಯಶಸ್ಸು ಸಾಧ್ಯ. ಧರ್ಮ ಸಮಾನತೆಯ‌ ಸೋಪಾನ. ಸಂಸ್ಥೆಯ ಜೀವಾಳ ಗ್ರಾಹಕರು. ಟೋಪ್ಕೋ ಟಾಪ್ ನಲ್ಲಿ‌ ಸಾಗಲಿ. ಸಂಸ್ಥೆಗೆ ಇನ್ನಷ್ಟು ಯಶಸ್ಸಾಗಲಿ ಎಂದರು.

ವಿಟ್ಲ ಚರ್ಚ್ ನ ರೆವರೆಂಡ್ ಫಾದರ್ ಐವನ್ ಮೈಕಲ್ ರಾಡ್ರಿಗಸ್ ರವರು ಮಾತನಾಡಿ ಸಂತೃಪ್ತ ಗ್ರಾಹಕರ ದೊಡ್ಡ ಬಳಗವೇ ಇಲ್ಲಿದೆ. ಅತೀ ಕಡಿಮೆ ಬೆಲೆಗೆ ಸ್ವರ್ಣಾಭರಣ ನೀಡುವ ವಿಶ್ವಾಸನೀಯ ಸಂಸ್ಥೆ ಇದಾಗಿದ್ದು, ನವೀಕೃತ ಸಂಸ್ಥೆಯಿಂದ ಗ್ರಾಹಕರಿಗೆ ಇನ್ನಷ್ಟು ಸಂತೃಪ್ತ ಸೇವೆ ಸಿಗುವಂತಾಗಲಿ. ಇದೊಂದು ಸೌಹಾರ್ದ ಸಂದೇಶ ಸಾರಿದ ಕಾರ್ಯಕ್ರಮವಾಗಿದೆ. ಎಲ್ಲಾ ದರ್ಮದ ಧರ್ಮಗುರುಗಳನ್ನು ಕಾರ್ಯಕ್ರಮಕ್ಕೆ ಕರೆಸಿ ಆ ಮೂಲಕ ಸೌಹಾರ್ದತೆಯ ಸಂದೇಶ ಸಾರಿದೆ. ಪ್ರೀತಿ ಸೌಹಾರ್ದತೆಯ ಜೀವನ‌ ನಮ್ಮದಾಗಲಿ. ಜಾತಿ, ಧರ್ಮ ಬೇದ ಮರೆತು ಸಂಸ್ಥೆಯನ್ನು‌ ಬೆಳೆಸೋಣ ಎಂದರು.

ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್ ರವರು ಮಾತನಾಡಿ ಶಾಂತಿಯ ಸಂದೇಶ ಸಾರುವ ಕೆಲಸ ಇಂದಿಲ್ಲಿ ನಡೆದಿದೆ. ವಿಟ್ಲಕ್ಕೆ ಗೌರವ ತರುವ ಕೆಲಸ ಸಂಸ್ಥೆಯಿಂದಾಗಿದೆ.
ಮಾಲಕರು ಕೇವಲ ಲಾಭದ ಉದ್ದೇಶವನ್ನು ಇಟ್ಟುಕೊಂಡು ಸಂಸ್ಥೆ ನಡೆಸದೆ ಅದರಲ್ಲಿ ಬಂದ ಲಾಭದ ಒಂದಂಶವನ್ನು ಸಮಾಜದಲ್ಲಿರುವ ಬಡ ಬಗ್ಗರಿಗೆ ನೀಡುವ ಕೆಲಸ ನಿರಂತರವಾಗಿ ನಡೆಸುತ್ತಾ ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಂಸ್ಥೆಯ ಬೆಳವಣಿಗೆಗೆ ಕಾರಣೀಭೂತರಾಗಬೇಕಿದೆ. ಸಿಬ್ಬಂದಿಗಳ ನಗುಮುಖದ ಸೇವೆ ಸಂಸ್ಥೆ ಬೆಳವಣಿಗೆಗೆ ಪೂರಕ. ಚಿನ್ನದ ಹಾಗೆ ಸಂಸ್ಥೆ ಇನ್ನಷ್ಟು ಪ್ರಕಾಶಿಸಲಿ ಎಂದರು.

ಇದೇ ಸಂದರ್ಭದಲ್ಲಿ ನೂತನ ವೆರೈಟಿಯ ಚಿನ್ನಾಭರಣ ರೋಸ್ ಗೋಳ್ಡ್ ಅನ್ನು ಅನಾವರಣಗೊಳಿಸಲಾಯಿತು. ಸಂಸ್ಥೆ‌ ನಡೆದು ಬಂದ ಹಾದಿ ಹಾಗೂ ಸಂಸ್ಥೆಯ ಬಗೆಗಿನ ಮಾಹಿತಿ ಉಳ್ಳ ಬ್ರೌಶರ್ ಅನ್ನು ಅತಿಥಿಗಳು ಬಿಡುಗಡೆ ಮಾಡಿದರು.

ವಿಟ್ಲ ಕೇಂದ್ರ ಮಸೀದಿ ಮುದರ್ರಿಸ್ ದಾವುದ್ ಹನೀಫಿ, ವಿಟ್ಲ ಟೌನ್ ಮಸೀದಿ ಖತೀಬು ಅಬ್ಬಾಸ್ ಮದನಿ, ಸಂಸ್ಥೆಯ ಆಡಳಿತ ನಿರ್ದೇಶಕ ಅಬ್ದುಲ್ ಅಝೀಜ್ ಟಿ.ಕೆ, ವಿಟ್ಲ ಶೋ ರೂಮ್ ಮುಖ್ಯಸ್ಥರಾದ ಮಹಮ್ಮದ್ ಟಿ.ಕೆ, ಪಾಲುದಾರರಾದ ನಝೀರ್ ಟಿ.ಕೆ, ಮುನೀರ್ ಟಿ.ಕೆ, ಮಹಮ್ಮದ್ ಅಸ್ಲಾಂ ಟಿ.ಕೆ, ಉದ್ಯಮಿ ವಿ.ಎಚ್ ಅಶ್ರಪ್, ಪಟ್ಟಣ ಪಂಚಾಯತ್ ಸದಸ್ಯ ವಿಕೆಎಂ ಅಶ್ರಫ್, ಉದ್ಯಮಿ ಅಬೂಬಕ್ಕರ್ ಪುತ್ತು ಉಪ್ಪಿನಂಗಡಿ, ಶಾಕೀರ್ ಅಳಕೆಮಜಲು, ಕಲಂದರ್ ಪರ್ತಿಪ್ಪಾಡಿ , ಅಬೂಬಕ್ಕರ್ ಅನಿಲಕಟ್ಟೆ, ಉಬೈದ್ ವಿಟ್ಲ ಬಝಾರ್, ಎಸ್ ಸಂಜೀವ ಮೊದಲಾದವರು ಉಪಸ್ಥಿತರಿದ್ದರು.

ಬಂಟ್ವಾಳ ಜಂಇಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ಸ್ವಾಗತಿಸಿದರು. ಪ್ರಜ್ಞಾ ಒಡಿಲ್ನಾಳ, ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

ವಿಶೇಷ ಆಕರ್ಷಣೆ:

ಪ್ರಸ್ತುತ ಸಮಾಜದಲ್ಲಿ ನಕಲಿ ದಲ್ಲಾಳಿಗಳ ಹಾವಳಿಯಿಂದ ಕಲಬೆರೆಕೆ ಚಿನ್ನಾಭರಣದ ಮಾರಾಟ ಮತ್ತು ಖರೀದಿ ವ್ಯಾಪಕವಾಗಿದ್ದು, ಜನರು ಮೋಸದ ಬಲೆಗೆ ಸಿಗಬಾರದು. ಕೇಂದ್ರ ಸರಕಾದ HUID ಸಂಸ್ಥೆಯ BIS ಪ್ರಮಾಣೀಕೃತ ಮಳಿಗೆಯಿಂದ ಚಿನ್ನಾಭರಣಗಳ ವ್ಯವಹಾರ ನಡೆಸುವ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರರಾದ ಕುದ್ರೋಳಿ ಗಣೇಶ್ ಅವರಿಂದ “ಅಬ್ರಕಡಬ್ರ” ಮಾಯಾಲೋಕ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಪ್ರತೀ 5 ನಿಮಿಷಕ್ಕೊಮ್ಮೆ ಡ್ರಾ:
ಕಾರ್ಯಕ್ರಮಕ್ಕೆ ಆಗಮಿಸಿರುವ ಗ್ರಾಹಕರಿಗೆ ಸಂಸ್ಥೆ ವಿಶೇಷ ಲಕ್ಕಿ ಕೂಪನ್ ವ್ಯವಸ್ಥೆ ಮಾಡಲಾಗಿದ್ದು, ಗ್ರಾಹಕರು ತಮ್ಮ ಹೆಸರು, ಊರಿನೊಂದಿಗೆ ಆ ಕೂಪನ್ ಅನ್ನು ಭರ್ತಿ ಮಾಡಿ ಬಾಕ್ಸ್ ಗೆ ಹಾಕಬೇಕಿತ್ತು. ಈ ಪೈಕಿ ಪ್ರತೀ ಐದು ನಿಮಿಷಕ್ಕೊಂಡು ವಿಜೇತರನ್ನು ಆಯ್ಕೆ ಮಾಡಿ ಅವರಿಗೆ ಆಕರ್ಷಕ ಬಹುಮಾನ ನೀಡಲಾಗುತ್ತಿತ್ತು. ಅದೇ ರೀತಿ ಗ್ರಾಹಕರಿಗೆ ಸ್ಟೇಟಸ್ ಹಾಕಿ ಬಹುಮಾನ ಗೆಲ್ಲುವ ವ್ಯವಸ್ಥೆಯನ್ನು ಸಂಸ್ಥೆ ಮಾಡಿದ್ದು, ಅತೀ ಹೆಚ್ಚು ವೀವ್ಸ್ ಆದ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ನೀಡಲಾಯಿತು.

ಆಫರ್ & ಗಿಫ್ಟ್ಸ್:

ನವೀಕರಣಗೊಂಡು ಉದ್ಘಾಟನೆಯ ಪ್ರಯುಕ್ತ ವಿವಿಧ ತರಹದ ಡಿಸೈನ್ಸ್, ಅಧಿಕ ಕಲೆಕ್ಷನ್ಸ್, ಅಪೂರ್ವ ವಿನ್ಯಾಸಗಳು ಲಭ್ಯವಿದೆ. ಉದ್ಘಾಟನೆ ದಿನದಿಂದ ಫೆ.1 ರ ತನಕ ಗ್ರಾಹಕರಿಗೆ ಶೇಕಡಾ 5 ಮೇಕಿಂಗ್ ಚಾರ್ಜ್, ಡೈಮಂಡ್ ಮತ್ತು ಬೆಳ್ಳಿ ಆಭರಣಗಳ ಮೇಲೆ ಶೇಕಡಾ 10 ರಿಯಾಯಿತಿ ಹಾಗೂ ಉದ್ಘಾಟನೆಯಂದು ಲಕ್ಕಿ ಗ್ರಾಹಕರಿಗೆ ಉಚಿತ ಡೈಮಂಡ್ ರಿಂಗ್ ಪಡೆಯುವ ಅವಕಾಶವಿದೆ.

ನೀವುಗಳು ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾವು ಅಭಾರಿಯಾಗಿದ್ದೇವೆ

ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾವು ಅಭಾರಿಯಾಗಿದ್ದೇವೆ. ಇಷ್ಟೊಂದು ಸಣ್ಣ ಪಟ್ಟಣದಲ್ಲಿ ತಮ್ಮೆಲ್ಲರ ಸಹಕಾರದಿಂದಾಗಿ ನಾವಿಂದು ಈ ಮಟ್ಟಕ್ಕೆ ಏರಲು ಸಾಧ್ಯವಾಗಿದೆ. ಆರಂಭದ ದಿನಗಳಿಂದಲೂ ನಮ್ಮೆಲ್ಲಾ ಬೆಳವಣಿಗೆಯಲ್ಲಿ ತಾವುಗಳು ಕಾರಣೀ ಬೂತರಾಗಿದ್ದಿರೀ. ಸಂಸ್ಥೆಯ ಉದ್ಘಾಟನೆ ಪ್ರಯುಕ್ತ ಗ್ರಾಹಕರಿಗೆ ಹಲವಾರು ಕೊಡುಗೆಗಳನ್ನು ನೀಡಲಾಗುತ್ತಿದೆ. ತಾವುಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಿ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಕೋರುತ್ತಿದ್ದೇವೆ.

ಪಿ ಸಿ ಮೂಸಾ ಹಾಜಿ, ಚೇಯರ್ ಮ್ಯಾನ್ ಟೋಪ್ಕೋ ಜ್ಯುವೆಲ್ಲರಿ

LEAVE A REPLY

Please enter your comment!
Please enter your name here