ಅಧ್ಯಕ್ಷರಾಗಿ ರೇಷ್ಮಾ ಜಯರಾಮ್ ನೆಕ್ಕರೆ, ಕಾರ್ಯದರ್ಶಿಯಾಗಿ ಸೌಮ್ಯ ಮೂವಳ
ಪುತ್ತೂರು: ಶ್ರೀ ಮಹಾದೇವಿ ಮಹಿಳಾ ಮಂಡಳಿ ಕಬಕ ಇದರ 13ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪದಗ್ರಹಣ ಕಾರ್ಯಕ್ರಮ ಕಬಕ ಶ್ರೀ ಮಹದೇವಿ ಕಲಾಮಂದಿರದಲ್ಲಿ ಜ.21ರಂದು ಶ್ರೀ ಮಹಾದೇವಿ ದೇವಸ್ಥಾನದ ಅಧ್ಯಕ್ಷರು ವಿ. ಚಂದ್ರಶೇಖರ್ ನಾಯ್ಕ್ ಹಾಗೂ ಕಾರ್ಯದರ್ಶಿ ಜತ್ತಪ್ಪ ಗೌಡ ಅಡ್ಯಾಲುರವರುಗಳ ಸಮ್ಮುಖದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ರೇಷ್ಮಾ ಜಯರಾಮ್ ನೆಕ್ಕರೆ, ಹಾಗೂ ಕಾರ್ಯದರ್ಶಿಯಾಗಿ ಸೌಮ್ಯ ಮೂವಳ ಆಯ್ಕೆಯಾದರು.
ಈ ವೇಳೆ ಕಬಕ ಶ್ರೀ ಮಹಾದೇವಿ ದೇವಸ್ಥಾನದ ಅಧ್ಯಕ್ಷರಾದ ವಿ. ಚಂದ್ರಶೇಖರ್ ನಾಯ್ಕ್ ರವರು ಮಾತನಾಡಿ ಹೊರಗಿನವರಿಗೆ ತಮ್ಮ ಮಠ, ಮಂದಿರ, ದೇವಸ್ಥಾನಗಳನ್ನು ನೋಡಿದಾಗ ಸಂಘಟನೆ ಹೇಗಿದೆ ಎಂಬುದು ಜನರಿಗೆ ಅರ್ಥ ಆಗುತ್ತದೆ. ನಮ್ಮ ದೇವಸ್ಥಾನದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಿಳಾ ಮಂಡಲದ ಸದಸ್ಯರು ಸಕ್ರಿಯವಾಗಿ ಬಾಗಹಿಸುತ್ತಿರುವುದು ನಮಗೆ ಸಂತೋಷ ತಂದಿದೆ ಎಂದು ಹೇಳಿ ಅಭಿನಂದನೆ ಸಲ್ಲಿಸಿದರು.
ದೇವಸ್ಥಾನದ ಕಾರ್ಯದರ್ಶಿ ಜತ್ತಪ್ಪ ಗೌಡ ಅಡ್ಯಾಲುರವರು ಮಾತನಾಡಿ ಸಂಘಟನೆ ಬಲಿಷ್ಠ ಆಗಬೇಕಾದರೆ ಮಹಿಳೆಯರ ಆದಷ್ಟು ಸಂಘಟನೆಗಳಲ್ಲಿ ತೊಡಗಿಕೊಳ್ಳುವಂತಾಗಬೇಕು. ಕಬಕದಲ್ಲಿ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗುವ ಮುಖಾಂತರ ನಮ್ಮ ಸಂಘದ ಹೆಸರು ಜಿಲ್ಲೆಯಲ್ಲೇ ಹೆಸರುವಾಸಿಯಾಗಿದೆ. ಇನ್ನಷ್ಟು ಮಹಿಳೆಯರನ್ನು ಮಹಿಳಾಮಂಡಲಕ್ಕೆ ಸೇರಿಸುವ ಕೆಲಸವಾಗಬೇಕು ಎಂದರು.
ನೂತನ ಅಧ್ಯಕ್ಷರಾದ ರೇಷ್ಮಾ ಜಯರಾಮ ನೆಕ್ಕರೆರವರು ಮಾತನಾಡಿ ಸಂಘಟನೆ ಬಲಿಷ್ಠ ಆಗಬೇಕಾದರೆ ಮಹಿಳೆಯರ ಪ್ರಯತ್ನ ಬಹಳಷ್ಠಿದೆ. ಹೆಣ್ಣು ಮಕ್ಕಳು ರಸ್ತೆಯಲ್ಲಿ ತಲೆ ಎತ್ತಿ ನಡೆಯಬೇಕಾದರೆ ಪ್ರತಿ ಗ್ರಾಮದಲ್ಲಿಯು ಮಹಿಳೆಯರು ಸಂಘಟಿತರಾಗಬೇಕು. ವಾರದಲ್ಲಿ ಅಥವಾ ತಿಂಗಳಲ್ಲಿ ಒಂದು ಬಾರಿ ಆದರೂ ನಾವು ಸಮಾಜಕ್ಕೆ ನಮ್ಮಿಂದ ಆಗುವ ಸಮಯವನ್ನು ಕೊಡುವಂತಹ ಪ್ರಯತ್ನ ನಡೆಸಬೇಕಿದೆ. ಮುಂದಿನ ದಿನಗಳಲ್ಲಿ ನಮ್ಮಿಂದಾಗುವ ಕೆಲಸ ಕಾರ್ಯಗಳನ್ನು ಮಾಡುತ್ತಾ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಕೆಲಸ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಯುವಕ ಮಂಡಲದ 26ನೇ ವಾರ್ಷಿಕೋತ್ಸವದ ದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಯುವಕ ಮಂಡಲದ ಅಧ್ಯಕ್ಷರಾದ ರಕ್ಷಿತ್ ಅಡ್ಯಾಲು, ಅಡ್ಯಾಲಯ ಸೇವಾ ಸಮಿತಿಯ ಉಪಾಧ್ಯಕ್ಷರು ರವೀಂದ್ರ ಕಲ್ಲಂದಡ್ಕ,ಉತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷರು ಜಯರಾಮ್ ನೆಕ್ಕರೆ, ಅಧ್ಯಕ್ಷರು ಧರ್ನಪ್ಪ ಗೌಡ ಸೀಗೆತ್ತಾಡಿ, ಮಾಜಿ ಅಧ್ಯಕ್ಷರು ಲೋಕೇಶ್ ಬಾಕಿಮಾರ್, ಯುವಕ ಮಂಡಲದ ಕಾರ್ಯದರ್ಶಿ ಯತೀಶ್ ಪದ್ನಡ್ಕ, ಯುವಕ ಮಂಡಲದ ಸದಸ್ಯರು ಭವಿತ್ ಕರ್ಗಲ್ಲು, ರಾಜ ವಿದ್ಯಾಪುರ, ಕಿರಣ್ ಅಡ್ಯಾಲು, ಮಹಿಳಾ ಮಂಡಲದ ಸದಸ್ಯರು ಸೌಮ್ಯ ಕಬಕ, ಗೀತಾ ಮೂವಳ, ಗೀತಾ ಅಡ್ಯಾಲು, ಶಾಂತಮ್ಮ ಅಡ್ಯಾಲು, ಪೂರ್ಣಿಮಾ ಕಬಕ,ಪುಷ್ಪ ಕಬಕ ಬೈಲು ಮೊದಲಾದವರು ಉಪಸ್ಥಿತರಿದ್ದರು. ವಾಣಿ ಕಬಕ ಬೈಲು ಕಾರ್ಯಕ್ರಮ ನಿರೂಪಿಸಿದರು, ಗೀತಾ ಕಳಮೆಮಜಲು ಸ್ವಾಗತಿಸಿದರು, ನೂತನ ಕಾರ್ಯದರ್ಶಿ ಸೌಮ್ಯ ಮೂವಳ ವಂದಿಸಿದರು.