ಉಪ್ಪಿನಂಗಡಿ: ಸಮಾಜ ಬಾಂಧವರ ಸಹಕಾರ ದೊರೆತರೆ ದೇವಾಲಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಆಡಳಿತ ಮೋಕ್ತೆಸರರಾದ ಬಿ.ಗಣೇಶ್ ಶೆಣೈ ಹೇಳಿದರು.
ಉಪ್ಪಿನಂಗಡಿಯ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಾಲಯದ ಜೀರ್ಣೋದ್ಧಾರ ಕುರಿತಂತೆ ಶ್ರೀ ಗುರು ಸುಧೀಂದ್ರ ಕಲಾಮಂದಿರದಲ್ಲಿ ಕರೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಮಾರು 150 ವರ್ಷಗಳಿಗೂ ಹೆಚ್ಚು ಇತಿಹಾಸವುಳ್ಳ ದೇವಾಲಯದ ಊರ ಪರವೂರ ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಕೈ ಜೋಡಿಸುವಂತೆ ಕೇಳಿಕೊಂಡರು.
ಬಳಿಕ ಜೀರ್ಣೋದ್ಧಾರ ಕುರಿತಂತೆ ಸಮಿತಿ ರಚಿಸುವಂತೆ ಭಕ್ತಾಧಿಗಳಿಂದ ಬಂದ ಕೋರಿಗೆಗೆ ಆಡಳಿತ ಮೊಕ್ತೆಸರರು ಸಮ್ಮತಿ ಸೂಚಿಸಿ ಕೆಲವು ಸಲಹೆಯನ್ನು ಪಡೆದುಕೊಂಡರು.
ಸಭೆಯಲ್ಲಿ ದೇವಾಲಯದ ಮೊಕ್ತೇಸರರಾದ ಯು. ನಾಗರಾಜ ಭಟ್, ಕೆ.ದೇವಿದಾಸ ಭಟ್, ಪ್ರಮುಖರಾದ ಎಚ್.ವಾಸುದೇವ ಪ್ರಭು, ಅಚ್ಚುತ ಪ್ರಭು, ಕರಾಯ ಗಣೇಶ ನಾಯಕ್, ಸತೀಶ ನಾಯಕ್, ನರಸಿಂಹ ನಾಯಕ್, ನೇಜಿಕಾರ್ ಸುರೇಶ ಪೈ, ಚಂದ್ರಕಾಂತ ಶೆಣೈ, ಕರಾಯ ರಾಘವೇಂದ್ರ ನಾಯಕ್, ಉಪೇಂದ್ರ ಪೈ, ಏಕನಾಥ ಶೆಣೈ, ಕೇಪುಳು ರಾಜೇಶ ನಾಯಕ್, ಶಾಂತರಾಮ ಶೆಣೈ, ಮಾಧವ ನಾಯಕ್, ಎಂ.ಶ್ರೀನಿವಾಸ ಭಟ್, ಪಣಕಜೆ ಪ್ರಸಾದ ಶೆಣೈ, ನಿಡ್ಡೋಡಿ ರವೀಂದ್ರ ಪ್ರಭು, ರವಳನಾಥ ಪ್ರಭು, ಶ್ರೀಕಾಂತ ಪ್ರಭು, ಯು.ರಾಜೇಶ ನಾಯಕ್ ಪೆದಮಲೆ, ಯು. ಯೊಗೀಶ ಪೈ, ಕೆ.ಮಾದವ ನಾಯಕ್, ಗಿರಿಧರ್ ನಾಯಕ್, ಸಂಪಡ್ಕ ಮಂಜುನಾಥ ಭಟ್, ಅರ್ಚಕರಾದ ರವೀಂದ್ರ ಭಟ್, ಸುಬ್ರಹ್ಮಣ್ಯ ಭಟ್, ಸಂದೀಪ್ ಭಟ್, ಶ್ರೀಧರ ಭಟ್, ರಾಜೇಂದ್ರ ಭಟ್ ಉಪಸ್ಥಿತರಿದ್ದರು.
ದೇವಾಲಯದ ವ್ಯವಸ್ಥಾಪಕರಾದ ಕೆ.ರಾಮಕೃಷ್ಣ ಪ್ರಭು ಮತ್ತು ಮಂಜುನಾಥ ನಾಯಕ್ ಸಹಕರಿಸಿದರು.