ಕಡಬ: ಕೊಂಬಾರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬೋಲ್ನಡ್ಕ ಕೊಂಬಾರು ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅನುದಾನ ವಿತರಣೆ ಕಾರ್ಯಕ್ರಮ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವಿರೇಂದ್ರ ಹೆಗ್ಗಡೆಯವರು ಮಂಜೂರುಗೊಳಿಸಿದ ಎರಡು ಲಕ್ಷ ಅನುದಾನ ಮೊತ್ತದ ಡಿಡಿಯನ್ನು ಕಡಬ ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮೇದಪ್ಪ ಗೌಡ ಯನ್ ರವರು ಬಿಳಿನೆಲೆ ವಲಯದ ಕೊಂಬಾರು ಬೋಳ್ನಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಸಮಿತಿಯ ಪಧಾದಿಕಾರಿಗಳಿಗೆ ವಿತರಿಸಿದರು.
ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಕಾರ್ಯಾತಡ್ಕ ವಹಿಸಿದ್ದರು. ವೇದಿಕೆಯಲ್ಲಿ ಕೊಂಬಾರು ಗ್ರಾಮ ಪಂಚಾಯತ್ ನ ಅಧ್ಯಕ್ಷ ಮಧುಸೂದನ್ ಒಡೋಳಿ ಕೊಂಬಾರು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಗೌಡ ಕೋಲ್ಪೆ, ಕೆಂಜಾಳ ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಗೌಡ ಕೊಡೆಂಕಿರಿ, ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಒಕ್ಕೂಟ ಕಾರ್ಯದರ್ಶಿಗಳಾದ ಚಿದಾನಂದ ದೇವುಪಾಲ್, ಹಾಗೂ ಚಂದ್ರಾವತಿ ಬೀಡು ,ದೇವಸ್ಥಾನ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪದಾಧಿಕಾರಿಗಳಾದ ಕೇಶವ ಗೌಡ ಪೂಯಿಲ, ಸಂಜೀವ ಅಗರಿ ಚೆನ್ನಕೇಶವ ಡಮ್ಮಡ್ಕ, ಬೇಬಿ ಪೂಯಿಲ, ಯಶೋಧ ಉಪಸ್ಥಿತರಿದ್ದರು. ಸಿರಿಬಾಗಿಲು ಸೇವಾಪ್ರತಿನಿಧಿ ವಿನೋದ್ ಕೆ.ಸಿ ಸ್ವಾಗತಿಸಿ, ಕೊಂಬಾರು ಸೇವಾಪ್ರತಿನಿಧಿ ಗಣೇಶ್ ಎ. ವಂದಿಸಿದರು.