ಪುತ್ತೂರು: ವ್ಯಕ್ತಿಯೊಬ್ಬರು ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುವನ್ನೂರು ಗ್ರಾಮದ ಪುಂಡಿಕಾಯಿಯಲ್ಲಿ ನಡೆದಿದೆ.
ಪಡುವನ್ನೂರು ಗ್ರಾಮದ ಪುಂಡಿಕಾಯಿ ನಿವಾಸಿ ವಯರಿಂಗ್ ಕೆಲಸ ನಿರ್ವಹಿಸುತ್ತಿದ್ದ ಮೋಹನ್ (34ವ.)ಎಂಬವರು ಆತ್ಮಹತ್ಯೆ ಮಾಡಿಕೊಂಡವರು.
ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಮೋಹನ್ ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ಜ.20ರಂದು ಮೋಹನ್ ಅವರು ರಾತ್ರಿ ಊಟ ಮಾಡಿ ಮಲಗಿದವರು ಜ.21ರ ಬೆಳಗ್ಗೆ ನಾಪತ್ತೆಯಾಗಿದ್ದರು. ಈ ಕುರಿತು ಹುಡುಕಾಡಿದಾಗ ಮೋಹನ್ ಅವರು ಮನೆಯ ಪಕ್ಕದ ಪದ್ಮನಾಭ ಭಟ್ ಎಂಬವರ ಜಾಗದ ಕಾಡು ಪ್ರದೇಶದಲ್ಲಿ ಉಪ್ಪಳಿಗೆ ಮರದ ಕೊಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತರ ಸಹೋದರ ಚಿರಂಜೀವಿ ನೀಡಿದ ದೂರಿನಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.