ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಪೆರ್ನಾಜೆಯ ಲಕ್ಷ್ಮೀನಾರಾಯಣ ಭಟ್, ಮದ್ಲ ಅವರು ಬೆಳ್ಳಿ ಕವಚವಿರುವ 108 ರುದ್ರಾಕ್ಷಿ ಇರುವ ರುದ್ರಾಕ್ಷಿ ಮಾಲೆ ಸಮರ್ಪಣೆ ಮಾಡಿದರು.
ಸುಮಾರು ರೂ. 21ಸಾವಿರ ಮೌಲ್ಯದ ರುದ್ರಾಕ್ಷಿ ಮಾಲೆಯನ್ನು ಜ.23 ರಂದು ಬೆಳಿಗ್ಗೆ ಶ್ರೀದೇವಳದ ಸತ್ಯ ಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿ ದೇವರಿಗೆ ಸಮರ್ಪಣೆ ಮಾಡಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ಚರ ಭಟ್, ಸದಸ್ಯರಾದ ವಿನಯ ಸುವರ್ಣ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಸಹಿತ ಹಲವಾರು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.