ಬಡಗನ್ನೂರು: ಬಡಗನ್ನೂರು ಸ.ಹಿ.ಉ..ಪ್ರಾ. ಶಾಲೆಗೆ ಬಡಗನ್ನೂರು ಗ್ರಾ.ಪಂ ವತಿಯಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸುಮಾರು 4 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣ ಹೊಂದಲಿರುವ ಶೌಚಾಲಯದ ಶಿಲಾನ್ಯಾಸ ಕಾರ್ಯಕ್ರಮ ಜ.23 ರಂದು ಬಡಗನ್ನೂರು ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಉದ್ಘಾಟಿಸಿ ಶುಭ ಹಾರೈಸಿದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಿ.ಕೆ ಸುಬ್ಬಯ್ಯ ಶಾಲೆಯ ಶ್ರೇಯಾಭಿವೃದ್ದಿ ನಿಟ್ಟಿನಲ್ಲಿ ಶಾಲಾ ದುರಸ್ತಿ ಹೊರತು ಪಡಿಸಿ ಉಳಿದಂತೆ ಶೌಚಾಲಯ, ಕಂಪೌಂಡ್ ರಚನೆ ಇತ್ಯಾದಿ ನರೇಗಾ ಯೋಜನೆಯಡಿ ಅವಕಾಶವಿದೆ ಎಂದರು.
ಗ್ರಾ.ಪಂ ಸದಸ್ಯ ಸಂತೋಷ್ ಆಳ್ವ ಗಿರಿಮನೆ ಮಾತನಾಡಿ, ನರೇಗಾ ಯೋಜನೆಯ 6೦, 40 ರಲ್ಲಿ ಶೌಚಾಲಯ ನಿರ್ಮಾಣಕ್ಕೆ 4 ಲಕ್ಷ ಹಾಗೂ ಕಂಪೌಂಡ್ ನಿರ್ಮಾಣಕ್ಕೆ 7 ಲಕ್ಷ ಅನುದಾನ ನಮ್ಮ ಅವಧಿಯಲ್ಲಿ ನೀಡಿದ್ದು ಸಂತೋಷ ತಂದಿದೆ ಎಂದು ಹೇಳಿದರು.ಕುಂಬ್ರ ಕ್ಲಸ್ಟರ್ ಸಿ ಆರ್.ಪಿ ಶಶಿಕಲಾ, ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ಕುಮಾರ ಅಂಬಟೆಮೂಲೆ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷರಾದ ಅಲಿಕುಂಞಿ ಕುವೆಂಜ, ತ್ಯಾಂಪಣ್ಣ ಮುಲ್ಯ ಸಿ.ಯಚ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಗಿರೀಶ್ ಗೌಡ ಕನ್ನಯ, ಸುಬ್ರಾಯ ನಾಯಕ್ ಮೇಗಿನಮನೆ, ಸುಲೋಚನ ನೇರ್ಲಪ್ಪಾಡಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಪಲ್ಲತ್ತಾರು ಕೊಯಿಲ ಬಡಗನ್ನೂರು ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ ಎಂ, ಗ್ರಂಥ ಪಾಲಕಿ ಪ್ರಿಯಾ, ಆಶಾ ಕಾರ್ಯಕರ್ತರುಗಳಾದ ಪುಷ್ಪಾವತಿ, ಇಂದಿರಾ, ಸುಗಂಧಿ, ಸುಶೀಲಾ, ಅಂಗನವಾಡಿ ಕಾರ್ಯಕರ್ತೆಯರಾದ ರಮಾಕಾಂತಿ, ಚಂದ್ರಮ್ಮ, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಹರೀಣಾಕ್ಷಿ ಎ ಸ್ವಾಗತಿಸಿ, ವಂದಿಸಿದರು. ಸಹ ಶಿಕ್ಷಕಿಯರಾದ ರಮ್ಯ ವಿಜಯಲಕ್ಷ್ಮಿ, ಅತಿಥಿ ಶಿಕ್ಷಕಿ ಮಧುಶ್ರೀ, ಗೌರವ ಶಿಕ್ಷಕಿ ಸೌಮ್ಯ ಸಹಕರಿಸಿದರು.