ಮಾಸ್ಟರ್ ಪ್ಲಾನ್ ನಂತೆ ಸಮಗ್ರ ಅಭಿವೃದ್ಧಿ – ಅಶೋಕ್ ಕುಮಾರ್ ರೈ
ಪುತ್ತೂರು:ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಜಮೀನಿನ ಮನೆಗಳಲ್ಲಿ ವಾಸ್ತವ್ಯವಿದ್ದ ದೇವಳದ ಹಿರಿಯ ಛತ್ರಿ ಪರಿಚಾರಕ ನಾರಾಯಣ ಶಗ್ರಿತ್ತಾಯ, ಎಟೆಂಡರ್ ವಿಶ್ವನಾಥ್, ಕುಟುಂಬದ ಹಿರಿಯರ ಸೇವೆಯೊಂದಿಗಿದ್ದ ನೇರಂಕಿ ಉಮಾ ಸುರೇಶ್ ರಾವ್ ಅವರು ಮನೆಗಳನ್ನು ಹಸ್ತಾಂತರಿಸುವ ಮೂಲಕ ದೇವಳದ ಅಭಿವೃದ್ಧಿಗೆ ಪೂರಕವಾಗಿ ಸಹಕರಿಸುವುದಾಗಿ ಹೇಳಿದ್ದಾರೆ.ಈ ಮೂಲಕ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮೊದಲ ಯಶಸ್ಸು ಕಂಡಿದ್ದಾರೆ.
ಜ.24ರಂದು ಹಿರಿಯ, ದೇವರ ಛತ್ರಿ ಹಿಡಿಯುವ ಪರಿಚಾರಕ ನಾರಾಯಣ ಶಗ್ರಿತ್ತಾಯ, ಎಟೆಂಡರ್ ವಿಶ್ವನಾಥ, ಉಮಾ ಸುರೇಶ್ ಅವರಿಗೆ ದೇವಳದ ಸತ್ಯಧರ್ಮ ನಡೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಶಗ್ರಿತ್ತಾಯ ಮನೆಯವರಿಗೆ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಸುವರ್ಣ, ಕೃಷ್ಣವೇಣಿ, ಮಹಾಲಬ ರೈ ವಳತ್ತಡ್ಕ, ನಳಿನಿ ಪಿ ಶೆಟ್ಟಿ, ಈಶ್ವರ ಬೇಡೆಕರ್, ಸುಭಾಷ್ ರೈ ಬೆಳ್ಳಿಪ್ಪಾಡಿ, ದಿನೇಶ್ ಪಿವಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಸಹಿತ ಹಲವಾರು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.