ಬಡಗನ್ನೂರು: ಬೃಹತ್ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ

0

ಬಡಗನ್ನೂರು: ಸ್ವಚ್ಚ ಸಂಸ್ಕೃತಿ, ನಮ್ಮ ಸಂಸ್ಕೃತಿ ಎಂಬ ಧ್ಯೇಯದೊಂದಿಗೆ ಸ್ವಚ್ಛ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಜಿಲ್ಲಾ ನೆರವು ಘಟಕ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಪುತ್ತೂರು, ಬಡಗನ್ನೂರು ಗ್ರಾ ಪಂ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಜ.22 ರಿಂದ 31ರ ತನಕ ನಡೆಯುವ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಕ್ಕೆ ಜ.23 ರಂದು ಬಡಗನ್ನೂರು ಸ.ಹಿ.ಉ.ಪ್ರಾಥಮಿಕ ಶಾಲಾ ಬಳಿಯಲ್ಲಿ ಚಾಲನೆ ನೀಡಲಾಯಿತು.

ಬಡಗನ್ನೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಿ.ಕೆ ಸುಬ್ಬಯ್ಯ ಮಾತನಾಡಿ, ಸ್ವಚ್ಚ ಪುತ್ತೂರು ತಾಲೂಕು ಮಾಡುವ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸ್ವಚ್ಚತಾ ಶ್ರಮದಾನವು 10 ದಿನಗಳ ಕಾಲ ನಡೆಯಲಿದೆ.  ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತಾವೆಲ್ಲರೂ ಸಹಕಾರವನ್ನು ನೀಡುವ ಮೂಲಕ ಸ್ವಚ್ಚ ಗ್ರಾಮವನ್ನಾಗಿ ಮಾಡುವಂತೆ ಕೇಳಿಕೊಂಡರು.  ಗ್ರಾ. ಪಂ  ಅಧ್ಯಕ್ಷೆ ಪುಷ್ಪಲತಾ ದೇವಕಜೆ ರವರು ಮಾತನಾಡಿ, 10 ದಿನಗಳ ಕಾಲ  ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆಯುವ ಸ್ವಚ್ಚತಾ ಶ್ರಮದಾನದಲ್ಲಿ ಪ್ರತಿಯೊಬ್ಬರು ಭಾಗವಹಿಸುವ ಮೂಲಕ ಮಾದರಿ ಸ್ವಚ್ಛ ಗ್ರಾಮವನ್ನಾಗಿ ಮಾಡುವಂತೆ ಕೈಜೋಡಿಸುವಂತೆ ಕೇಳಿಕೊಂಡರು.

ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ಕುಮಾರ ಅಂಬಟೆಮೂಲೆ,  ಕುಂಬ್ರ ಕ್ಲಸ್ಟರ್ ಸಿ ಆರ್ ಪಿ ಶಶಿಕಲಾ ಶಾಲಾಭಿವೃದ್ಧಿ ಸಮಿತಿ  ಮಾಜಿ ಅಧ್ಯಕ್ಷರುಗಳಾದ ಅಲಿಕುಂಞಿ ಕುವೆಂಜ, ತ್ಯಾಂಪಣ್ಣ ಮುಲ್ಯ ಸಿ.ಯಚ್,  ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳಾದ  ಗಿರೀಶ್ ಗೌಡ ಕನ್ನಯ, ಸುಬ್ರಾಯ ನಾಯಕ್ ಮೇಗಿನಮನೆ, ಸುಲೋಚನ ನೇರ್ಲಪ್ಪಾಡಿ, ಜಿ.ಪಂ ಗುತ್ತಿಗೆಗಾರ ತಿಮ್ಮಪ್ಪ ಪಾಟಾಳಿ,   ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಪಲ್ಲತ್ತಾರು ಕೊಯಿಲ ಬಡಗನ್ನೂರು ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ ಎಂ, ಬಡಗನ್ನೂರು ಸ.ಹಿ.ಉ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಹರೀಣಾಕ್ಷಿ ಎ, ಸಹ ಶಿಕ್ಷಕಿಯರಾದ ರಮ್ಯ, ವಿಜಯಲಕ್ಷ್ಮಿ, ಗವರವ ಶಿಕ್ಷಕಿ ಸೌಮ್ಯ, ಅತಿಥಿ ಶಿಕ್ಷಕಿ ಮಧುಶ್ರೀ, ಗ್ರಂಥ ಪಾಲಕಿ ಪ್ರಿಯಾ, ಸಂಜೀವಿನಿ ಎಂ ಬಿ.ಕೆ ರಮ್ಯ    ಅಶಾ ಕಾರ್ಯಕರ್ತರುಗಳಾದ ಪುಷ್ಷಾವತಿ ಇಂದಿರಾ, ಸುಗಂಧಿ, ಸುಶೀಲಾ ಅಂಗನವಾಡಿ ಕಾರ್ಯಕರ್ತರುಗಳಾದ ರಮಾಕಾಂತಿ, ಚಂದ್ರಮ್ಮ  ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here