ಬೊಳುವಾರು ಕ್ಷೇತ್ರದಲ್ಲಿ 9ನೇ ಪ್ರತಿಷ್ಠಾ ವಾರ್ಷಿಕೋತ್ಸವ, ಚಂಡಿಕಾಯಾಗ

0

ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರಿ ಉಳ್ಳಾಲ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ 9ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ, ಚಂಡಿಕಾಯಾಗ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.24ರಂದು ನಡೆಯಿತು.

ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯ ವರಣ, ಮಹಾಗಣಪತಿ ಹೋಮ, ಪಂಚವಿಂಶತಿ ಕಲಶಪೂಜೆ, ಕಲಶಾಭಿಷೇಕ, ನಾಗದೇವರಿಗೆ ಪಂಚಾಮೃತಾಭಿಷೇಕ, ತಂಬಿಲ ಸೇವೆ, ಮಲರಾಯ ಮತ್ತು ಪರಿವಾರ ದೈವಗಳಿಗೆ ತಂಬಿಲ ಸೇವೆ, ಭಗವದ್ಗೀತೆ ಪಾರಾಯಣ, ಲಲಿತಾ ಸಹಸ್ರನಾಮ ಪಠಣ, ಮಧ್ಯಾಹ್ನ ಚಂಡಿಕಾ ಯಾಗದ ಪೂರ್ಣಾಹುತಿ, ಸುವಾಸಿನಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.


ಸಂಜೆ ಸುಸ್ವರ ಮೆಲೋಡಿಯಸ್ ಉಪ್ಪಿನಂಗಡಿ ಇವರಿಂದ ಭಕ್ತಿ-ಭಾವ-ಗಾನ ಸಂಭ್ರಮ, ವಿದುಷಿ ಮಂಜುಳಾ ಸುಬ್ರಹ್ಮಣ್ಯ ನಿರ್ದೇಶನದ, ನಾಟ್ಯರಂಗ ಪುತ್ತೂರು ಕಲಾವಿದರಿಂದ ನೃತ್ಯಾರ್ಪಣಂ, ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ಭಜನಾ ಮಂಡಳಿಯವರಿಂದ ಭಜನೆ, ರಾತ್ರಿ ವೇಣುಗೋಪಾಲ್ ಮತ್ತು ಬಳಗದಿಂದ ಸ್ಯಾಕ್ಸೋಫೋನ್ ವಾದನ, ಶ್ರೀ ದೇವರಿಗೆ ಸರ್ವಾಲಂಕಾರ ಸಹಿತ ಕಲ್ಪೋಕ್ತ ದುರ್ಗಾಪೂಜೆ, ರಂಗಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಶ್ರೀದುರ್ಗಾ ಉಳ್ಳಾಲ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನದ ಯಕ್ಷಗಾನ ತರಬೇತಿಯ ಶಿಷ್ಯವರ್ಗ ಹಾಗೂ ಹಿರಿಯ ಸದಸ್ಯರಿಂದ ದಕ್ಷಯಜ್ಞ-ವೀರವರ್ಮ ಕಾಳಗ ಯಕ್ಷಗಾನ ಬಯಲಾಟ ಜರಗಿತು.

LEAVE A REPLY

Please enter your comment!
Please enter your name here