ಅಧ್ಯಕ್ಷರಾಗಿ ಅಶ್ರಫ್ ರೋಝಾ, ಉಪಾಧ್ಯಕ್ಷರಾಗಿ ತುಳಸಿ
ನಿಡ್ಪಳ್ಳಿ: ದ.ಕ.ಜಿ.ಪಂ. ಉನ್ನತ ಹಿರಿಯ ಪ್ರಾಥಮಿಕ ಶಾಲೆ ಪೇರಲ್ತಡ್ಕ ಇದರ ನೂತನ ಶಾಲಾಭಿವೃದ್ದಿ ಸಮಿತಿಯನ್ನು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಇವರ ಸಮ್ಮುಖದಲ್ಲಿ ಜ.22 ರಂದು ರಚಿಸಲಾಯಿತು.
ಅಧ್ಯಕ್ಷರಾಗಿ ಅಶ್ರಫ್ ರೋಝಾ, ಉಪಾಧ್ಯಕ್ಷರಾಗಿ ತುಳಸಿ ಆಯ್ಕೆಯಾದರು. ಸದಸ್ಯರುಗಳಾಗಿ ಸುಂದರ ಗೋಳಿಪದವು, ಸೌಮ್ಯಲತಾ, ಚೈತ್ರಾ.ಕೆ, ಅನಿತಾ ದೆಯ್ಯಾರಡ್ಕ ಹನೀಫ್.ಪಿ, ಉಮ್ಮರ್ ಶಾಫಿ, ಅಲೀಮಾ, ಮಹಮ್ಮದ್ ಷರೀಫ್, ಖದೀಜತ್ ರಾಹಿಲ, ನೆಫಿಸತ್ ಮಿಶ್ರಿಯಾ, ಸಾಜಿದಾ,ಆಯಿಷತುಲ್ ಝಕಿಯತ್, ಶಿವಪ್ರಸಾದ್, ಬಾಬು ಮೂಲ್ಯ, ಶ್ರೀಧರ ಗೌಡ ಪಟ್ಟೆ, ಸುಜಾತ ರೈ ರನ್ನು ಆಯ್ಕೆ ಮಾಡಲಾಯಿತು.
ಶಾಲಾ ಮುಖ್ಯ ಗುರು ಜಾನಕಿ, ಬೆಟ್ಟಂಪಾಡಿ ಪಂಚಾಯತ್ ಉಪಾಧ್ಯಕ್ಷ ಮಹೇಶ್.ಕೆ, ಪಂಚಾಯತ್ ಸದಸ್ಯರು, ಶಿಕ್ಷಕ ವೃಂದ, ಮಕ್ಕಳ ಪೋಷಕರು ಉಪಸ್ಥಿತರಿದ್ದರು.