ನೆಲ್ಯಾಡಿ: ಜೆಸಿಐ ನೆಲ್ಯಾಡಿ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಯುವಜನತೆ ಹಾಗೂ ಸುಸ್ಥಿರ ಭವಿಷ್ಯಕ್ಕಾಗಿ ಯುವಜನತೆ ಎಂಬುದರ ಕುರಿತಾಗಿ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷ ಪ್ರಕಾಶ್ ಸ್ವಾಗತಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನಿಕಟ ಪೂರ್ವ ಅಧ್ಯಕ್ಷ ಸುಚಿತ್ರ ಬಂಟ್ರಿಯಲ್ ರವರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಥನಿ ಐಟಿಐ ಪ್ರಾಂಶುಪಾಲರ ಸಜಿ ಕೇ ತೋಮಸ್ ಅವರು ವಹಿಸಿದ್ದರು. ತರಬೇತುದರಾಗಿ ಪೂರ್ವ ರಾಜ್ಯ ಉಪಾಧ್ಯಕ್ಷರು ಪೂರ್ವ ಅಧ್ಯಕ್ಷರಾದ Jc HGF ರವೀಂದ್ರ ಟಿ ರವರು ಅತ್ಯುತ್ತಮವಾಗಿ ತರಬೇತಿ ನೀಡಿದರು.
ಯುವ ಜನತೆ ದೇಶದ ಬೆನ್ನೆಲುಬು ಯುವ ಜನತೆ ದೇಶದ ಆಸ್ತಿ. ಪ್ರತಿಯೊಬ್ಬನು ದೇಶದ ಉತ್ತಮ ಪ್ರಜೆಯಾಗಬೇಕು. ಎಲ್ಲರೂ ವಿದ್ಯಾವಂತರಾಗಿ ಸ್ವಾವಲಂಬಿಯಾಗಿ ಒಳ್ಳೆಯ ಆಲೋಚನೆ ಮತ್ತು ಒಳ್ಳೆಯ ಕೆಲಸಗಳಿಂದ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಬೇಕು. ಸ್ವಾಮಿ ವಿವೇಕಾನಂದರು ನಮಗಿಲ್ಲರಿಗೂ ಮಾದರಿ ಮತ್ತು ಆದರ್ಶ ಅವರ ಪರಿಕಲ್ಪನೆಯಂತೆ ಜೀವನದುದ್ದಕ್ಕೂ ಒಳ್ಳೆಯ ತತ್ವಗಳನ್ನು ಪಾಲಿಸಿ ಪ್ರತಿಯೊಂದು ಕೆಲಸಕ್ಕೂ ಗುರಿ ಇರಬೇಕು ಪ್ರತಿಯೊಂದು ಸವಾಲುಗಳನ್ನು ಧೈರ್ಯದಿಂದಲೇ ಎದುರಿಸಬೇಕು. ದೇಶಕ್ಕಾಗಿ ನೀನೇನು ಒಳ್ಳೆಯದನ್ನು ಮಾಡಬಹುದು ಎಂದು ಆಲೋಚಿಸಿ ಸ್ವಂತ ನಿರ್ಧಾರಗಳು ತೆಗೆದುಕೊಳ್ಳುವುದು ಅತಿ ಮುಖ್ಯ ಎಂದು ತರಬೇತಿ ನೀಡಿದರು.
ಮುಖ್ಯ ಅತಿಥಿಗಳಾದ ಸಜಿ ಕೆ ತೋಮಸ್ ರವರು ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ದೃಢ ನಿರ್ಧಾರ ಇದ್ದರೆ ಏನನ್ನು ಸಾಧಿಸಲು ಸಾಧ್ಯ ಹಾಗೆ ಸದೃಢ ಸಮಾಜವನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕು ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿರುವಂತಹ ನಿಕಟ ಪೂರ್ವ ಅಧ್ಯಕ್ಷರಾದ ಸುಚಿತ್ರ ಬಂಟ್ರಿಯಲ್ ಇವರು ನಮ್ಮಲ್ಲಿ ಇರುವಂತಹ ಒಳ್ಳೆಯ ಶಕ್ತಿಯನ್ನು ಮುಂದೆ ತರಬೇಕು ಹಾಗೆಯೇ ನಮ್ಮಲ್ಲಿ ಆತ್ಮವಿಶ್ವಾಸ ಇರಬೇಕು ನಮ್ಮಲ್ಲಿ ಧೈರ್ಯವನ್ನು ಬೆಳೆಸಿಕೊಳ್ಳಬೇಕು ಧೈರ್ಯವಿದ್ದರೆ ಏನನ್ನು ಸಾಧಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಕಾರ್ಯಕ್ರಮದಲ್ಲಿ ಜೆಸಿಐ ನೆಲ್ಯಾಡಿ ಯ ಮಹಿಳಾ ಅಧ್ಯಕ್ಷರಾದ ಜೆಸಿ ಪ್ರವೀಣಿ ಸುಧಾಕರ್ ಶೆಟ್ಟಿಯವರು ಉಪಸ್ಥಿತರಿದ್ದರು. ಹಾಗೆಯೇ ಜೇಸಿಐ ನೆಲ್ಯಾಡಿ ಯ ಕಾರ್ಯದರ್ಶಿಯಾದ ನವ್ಯ ಪ್ರಸಾದ್ ನೆಲ್ಯಾಡಿ ಯವರು ಉಪಸ್ಥಿತರಿದ್ದರು. ಸಂಸ್ಥೆಯ ಉಪನ್ಯಾಸಕರು ಹಾಗೂ ನಿಕಟ ಪೂರ್ವ ಅಧ್ಯಕ್ಷರುಗಳಾದ ಪ್ರಕಾಶ್ ಮಾತು ಜೋನ್ ಉಪಸ್ಥಿತರಿದ್ದರು. ತರಬೇತಿಯನ್ನು ಐಟಿಐ ವಿದ್ಯಾರ್ಥಿಗಳೆಲ್ಲರೂ ಮೌನವಾಗಿ ಆಲಿಸಿದರು. ಜೇಸಿಐ ನೆಲ್ಯಾಡಿ ಕಾರ್ಯದರ್ಶಿಯಾದ ನವ್ಯ ಪ್ರಸಾದ್ ನೆಲ್ಯಾಡಿ ವಂದಿಸಿದರು.