ಜ.26: ಕೆದಂಬಾಡಿ ಕನ್ನಡ ಮೂಲೆಯಲ್ಲಿ ಶ್ರೀದೇವಿ ಮಹಾತ್ಮೆ

0

ಪುತ್ತೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಜ.26 ರಂದು‌ ಸಂಜೆ ಗಂಟೆ 6 ರಿಂದ ಕೆದಂಬಾಡಿ ಗ್ರಾಮದ ಕನ್ನಡಮೂಲೆ ಮನೆಯ ವಠಾರದಲ್ಲಿ
” ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ ನಡೆಯಲಿದೆ.

ಸಂಜೆ ಗಂಟೆ 3 ರಿಂದ ಶ್ರೀ ದೇವತಾ ಭಜನಾ ಮಂದಿರ ತಿಂಗಳಾಡಿಯಿಂದ ಕುಣಿತ ಭಜನೆಯೊಂದಿಗೆ ಶ್ರೀ ದೇವಿಯ ಭವ್ಯ ಮೆರವಣಿಗೆ., ಸಂಜೆ ಗಂಟೆ 5.45 ಕ್ಕೆ ಶ್ರೀ ದೇವಿಯ ಚೌಕಿ ಪೂಜೆ, ರಾತ್ರಿ ಗಂಟೆ 8 ರಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದು ‌ಯಕ್ಷಗಾನ ಬಯಲಾಟದ ಸೇವಾಕರ್ತರಾದ ಕುರಿಕ್ಕಾರ ನಾಗೇಶ್ ರೈ, ಮುಳಿಂಜಗುತ್ತು ರಮ್ಯ ರೈ, ತ್ರಿಶಾನ್ ಎನ್ ರೈ ಹಾಗೂ ಶ್ರೀಯಾನ್ ಎನ್ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here