ಪುತ್ತೂರು: 2023-24ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ನಡೆದ ರಾಷ್ಟ್ರಮಟ್ಟದ ಗೋಲ್ಡನ್ ಆರೋ (GOLDEN ARROW) ಪರೀಕ್ಷಾ ಶಿಬಿರದಲ್ಲಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8 ಕಬ್ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿಗಳಾದ ಆರ್ಯನ್ ಕೆ (ಶ್ರೀ ಅರುಣ್ ಬಿ.ಕೆ. ಹಾಗೂ ರೇಷ್ಮಾ ದಂಪತಿ ಪುತ್ರ), ಅಥರ್ವ ಎಸ್. ಆರ್. (ರಾಮ ನಾಯ್ಕ್ ಎಂ. ಹಾಗೂ ಸೌಮ್ಯ ದಂಪತಿ ಪುತ್ರ), ಹವ್ಯಾಸ್ ಎಂ. ಎಸ್.( ಸುರೇಶ್ ಗೌಡ ಎಂ ಹಾಗೂ ವೀಣಾ ಕುಮಾರಿ ಟಿ ದಂಪತಿ ಪುತ್ರ), ಕೆ.ಮನ್ವಿತ್ ರೈ(ಕೆ.ಮೋಹನ್ ರೈ ಮತ್ತು ಮೈನಾ ದಂಪತಿ ಪುತ್ರ), ಕ್ಷಿತಿಜ್ ರೈ (ಜಗದೀಶ್ ರೈ ಹಾಗೂ ಶೋಭಾ ಜೆ. ರೈ ದಂಪತಿ ಪುತ್ರ) ರಿತ್ವಿಕ್ ಆರ್. ರೈ (ರಘುರಾಮ ರೈ ಹಾಗೂ ವಿದ್ಯಾ ಕುಮಾರಿ ಕೆ ದಂಪತಿ ಪುತ್ರ), ಶಶಾಂಕ ಟಿ.ಆರ್. (ರಘುರಾಮ ಟಿ. ಎಸ್. ಹಾಗೂ ದೀಪ್ತಿ ಆರ್. ಭಟ್ ದಂಪತಿ ಪುತ್ರ)ಯಶ್ವಿತ್ ಕುಮಾರ್ ಆರ್.( ರಾಮ ಕೆ.ಹಾಗೂ ಜಾನಕಿ ದಂಪತಿ ಪುತ್ರ). ಇವರಿಗೆ ಲೇಡಿ ಕಬ್ ಮಾಸ್ಟರ್ ಶ್ರೀಮತಿ ಪುಷ್ಪಲತಾ ಕೆ ಮಾರ್ಗದರ್ಶನ ನೀಡಿರುತ್ತಾರೆ ಎಂದು ಮುಖ್ಯಗುರು ಶ್ರೀ ಸತೀಶ್ ಕುಮಾರ್ ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.