





ಪುತ್ತೂರು: ಪುತ್ತೂರು ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ ಪ್ರಥಮ ವರ್ಷದ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳ ನೇತೃತ್ವದಲ್ಲಿ ಕೆದಂಬಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಕಲಾ ಕಲರವ” ಕಾರ್ಯಕ್ರಮ ಜ.22ರಂದು ನಡೆಯಿತು.


ಕೆದಂಬಾಡಿ ಹಿರಿಯ ಪ್ರಾಥಮಿಕ ಶಾಲೆಯ SDMC ಅಧ್ಯಕ್ಷ ಕೃಷ್ಣಕುಮಾರ್ ಇದ್ದ್ಯಪ್ಪೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಈಗಿನ ಡಿಜಿಟಲ್ ಯುಗದಲ್ಲಿ ಮಕ್ಕಳ ಗಮನ ಇಂತಹ ಕರಕುಶಲ ಚಟುವಟಿಕೆಗಳ ಕಡೆಗೆ ಸೆಳೆಯುವ ಅವಶ್ಯಕತೆಯನ್ನು ಕುರಿತು ಮಾತನಾಡಿದರು.





ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಕೆಯ್ಯೂರು ಇಲ್ಲಿನ ಚಿತ್ರಕಲಾ ಶಿಕ್ಷಕ ಪ್ರಕಾಶ್ ವಿಟ್ಲ ಅವರು ಮಕ್ಕಳನ್ನುದ್ದೇಶಿಸಿ ಸ್ಪೂರ್ತಿದಾಯಕ ನುಡಿಗಳನ್ನಾಡಿದರು. ಶಾಲೆಯ ಮುಖ್ಯಶಿಕ್ಷಕಿ ನಾಗವೇಣಿ.ಕೆ ಹಾಗೂ ಸಹ ಶಿಕ್ಷಕಿ ಜಾನಕಿ ಬಿ.ಎಸ್ ಇವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪ್ರಥಮ ವರ್ಷದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಪೂಜಾ.ಎಮ್ ಕಾರ್ಯಕ್ರಮವನ್ನು ನಿರೂಪಿಸಿ, ಲವಿತ್ ಕುಮಾರ್.ಕೆ ಅತಿಥಿಗಳನ್ನು ಸ್ವಾಗತಿಸಿದರು. ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ವರ್ಷದ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿ ಸ್ನೇಹಾ ರೋಸ್ ಜೇಕಬ್ ವಂದಿಸಿದರು. ಕೆದಂಬಾಡಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು.









