ಪುತ್ತೂರು: ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲೇ ಜನಪ್ರಿಯವೆನಿಸಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರ ಮಹಾ ಚಿನ್ನದ ಸಾಲ ಮೇಳ ಪ್ರಾರಂಭಿಸಿದೆ. ಗ್ರಾಹಕರ ಹಲವು ಬಗೆಯ ಅಗತ್ಯಗಳಿಗಾಗಿ ಚಿನ್ನಾಭರಣಗಳ ಈಡಿನ ಮೇಲಿನ ಸಾಲವನ್ನು ಅತೀ ಕಡಿಮೆ ಬಡ್ಡಿದರದಲ್ಲಿ ಘೋಷಣೆ ಮಾಡಿದೆ.
ವಾರ್ಷಿಕ 8.70 ಶೇಕಡಾ ಬಡ್ಡಿಯ ದರದಲ್ಲಿ ಸಾಲ ಸೌಲಭ್ಯ ಸಿಗಲಿದ್ದು , ಪ್ರತಿ ಗ್ರಾಂ ಚಿನ್ನಕ್ಕೆ ರೂಪಾಯಿ 6010-00 ಸಿಗಲಿದ್ದು , ಬರೀ 15 ನಿಮಿಷಗಳಲ್ಲಿ ಸಾಲ ಮಂಜೂರು ಮಾಡಲಾಗುವುದೆಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ. ಯಾವುದೇ ಮನೆ ನಿರ್ಮಾಣ ಸಾಲವು ಶೇಕಡಾ 8.35 ದರದಲ್ಲಿ , ಕಾರು ಖರೀದಿ ಸಾಲ ಶೇಕಡಾ 8.7 ದರದಲ್ಲಿ ಲಭ್ಯವಿದ್ದು , ಕೃಷಿ ಕಾರ್ಯ, ವ್ಯವಹಾರ ಸಾಲ, ವೈಯಕ್ತಿಕ ಸಾಲಗಳ ಸಹಿತ ಹಲವು ಬಗೆಯ ಸಾಲಗಳು ಅತೀ ಕಡಿಮೆ ಬಡ್ಡಿ ದರದಲ್ಲಿ ಸಿಗಲಿವೆಯೆಂದು ಶಾಖಾ ಪ್ರಬಂಧಕರು ತಿಳಿಸಿದ್ದಾರೆ. ಇನ್ನೂ ಅಧಿಕ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9742582575ಯನ್ನು ಸಂಪರ್ಕಿಸುವಂತೆ ಅವರು ವಿನಂತಿಸಿದ್ದಾರೆ.