





- ರಾಣೆಬೆನ್ನೂರು ನಗರಸಭೆಯಲ್ಲಿ ಕೆಪಿಜೆಪಿ ಜೊತೆ ಕಾಂಗ್ರೆಸ್ ಮೈತ್ರಿ
- ಕೆಪಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪೆರ್ಲಂಪಾಡಿಯ ಮಹೇಶ್ ಗೌಡ
ಪುತ್ತೂರು: ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ನಿವಾಸಿ ಡಾ. ಮಹೇಶ್ ಗೌಡ ರವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಕರ್ನಾಟಕದಲ್ಲಿ ಕೆಪಿಜೆಪಿ ( ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ) ವನ್ನು ಸ್ಥಾಪಿಸಿ ಆ ಬಳಿಕ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹಲವು ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಸವಾಲೊಡ್ಡಿದ್ದ ಪೆರ್ಲಂಪಾಡಿಯ ಮಹೇಶ್ ಗೌಡರವರ ಪಕ್ಷ ರಾಣೆಬೆನ್ನೂರಿನಲ್ಲಿ ಒಂದು ಕ್ಷೇತ್ರವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.


ಅದೇ ವರ್ಷದಲ್ಲಿ ಕೆಪಿಜೆಇ ಶಾಸಕ ಶಂಕರ್ ಮಂತ್ರಿಯೂ ಆಗಿದ್ದರು. ಈ ವೇಳೆ ಅತೀ ಹೆಚ್ಚು ಸುದ್ದಿಯಾದವರು ಪೆರ್ಲಂಪಾಡಿಯ ಮಹೇಶ್ ಗೌಡ ಅವರು. ಇದೀಗ ರಾಣೆ ಬೆನ್ನೂರು ನಗರಸಭಾ ಚುನಾವಣೆಯ ಬಳಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನಗರಸಭಾ ಚುನಾವಣೆಯಲ್ಲಿ ಇವರ ಪಕ್ಷ 10 ಸ್ಥಾನಗಳನ್ನು ಗೆದ್ದು ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಅಧ್ಯಕ್ಷೀಯ ಆಯ್ಕೆ ವೇಳೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಕೆಪಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಕೆಪಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮಹೇಶ್ ಗೌಡರ ಜೊತೆ ಮಾತುಕತೆ ನಡೆಸಿದ ಕಾಂಗ್ರೆಸ್ ವರಿಷ್ಠರು ಮೈತ್ರಿ ಮಾಡಿಕೊಂಡು ಉಪಾಧ್ಯಕ್ಷ ಸ್ಥಾನವನ್ನು ಕೆಪಿಜೆಪಿಯ ನಾಗರಾಜ ಪವಾರ ಎಂಬವರಿಗೆ ನೀಡಲಾಗಿದೆ. ಈ ಮೂಲಕ ಪುತ್ತೂರಿನ ವ್ಯಕ್ತಿ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದಾರೆ.














