ಆರ್ಲಪದವಿನಲ್ಲಿ ಬೃಹತ್ ಸ್ವಚ್ಚತಾ ಆಂದೋಲನ

0

ನಿಡ್ಪಳ್ಳಿ: ಆರ್ಲಪದವು ಕಿನ್ನಿಮಾಣಿ – ಪೂಮಾಣಿ , ಪಿಲಿಭೂತ ದೈವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವ ಮುಕ್ತಾಯಗೊಂಡಿದ್ದು, ಇದೀಗ ದೈವಸ್ಥಾನದ ವಠಾರವನ್ನು ಸ್ವಚ್ಚಗೊಳಿಸುವ ಬೃಹತ್ ಸ್ವಚ್ಚತಾ ಆಂದೋಲನ ಫೆ.1 ರಂದು ನಡೆಯಿತು.

 ನಮ್ಮ ಸಂಸ್ಕ್ರತಿ ಸ್ವಚ್ಚ ಸಂಸ್ಕ್ರತಿ ಸ್ವಚ್ಚ ಪಾಣಾಜೆ ಧ್ಯೇಯದಡಿಯಲ್ಲಿ ನಡೆದ ಈ ಆಂದೋಲನದಲ್ಲಿ  ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮುನಾತುಲ್ ಮೆಹ್ರಾ, ಉಪಾಧ್ಯಕ್ಷೆ ಜಯಶ್ರೀ. ಡಿ ಹಾಗೂ ಸದಸ್ಯರು, ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡರು.  

 ದೈವಸ್ಥಾನದ ಆಡಳಿತ ಮೋಕ್ತೆಸರರಾದ ಶ್ರೀಕೃಷ್ಣ ಬೋಳಿಲ್ಲಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ರೈ ಮತ್ತೀತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  

LEAVE A REPLY

Please enter your comment!
Please enter your name here