ತಣ್ಣೀರು ಬಾವಿ ಕಡಲ ತೀರದಲ್ಲಿ ಕುಸ್ತಿ ಕಲರವ

0
  • ಮಂಗಳೂರಿಗರ ಗಮನ ಸೆಳೆದ ರಾಜ್ಯಮಟ್ಟದ ಬೀಚ್ ಕುಸ್ತಿ ಚಾಂಪಿಯನ್ ಶಿಪ್-2025
  • ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿ ಚಾಲನೆ

ಮಂಗಳೂರು: ತಣ್ಣೀರು ಬಾವಿ ಕಡಲತೀರದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ 2025ರ ರಾಜ್ಯಮಟ್ಟದ ಬೀಚ್ ಕುಸ್ತಿ ಚಾಂಪಿಯನ್ ಶಿಪ್ ಯಶಸ್ವಿಯಾಗಿ ನೆರವೇರಿತು.

ಜಿಲ್ಲೆಯ ತಣ್ಣೀರು ಬಾವಿ ಕಡಲತೀರದಲ್ಲಿ ಮಂಗಳೂರು ಬೀಚ್ ಫೆಸ್ಟಿವಲ್ ನಲ್ಲಿ ಕರ್ನಾಟಕ ಕುಸ್ತಿ ಸಂಘದ ವತಿಯಿಂದ ತಪಸ್ಯ ಫೌಂಡೇಶನ್ ಸಹಕಾರದೊಂದಿಗೆ ಎರಡು ದಿನಗಳ ಕಾಲ ಆಯೋಜಿಸಿದ್ದ ರಾಜ್ಯಮಟ್ಟದ ಕುಸ್ತಿ ಚಾಂಪಿಯನ್ ಶಿಪ್ -2025 ನಲ್ಲಿ ಮಂಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 110 ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 15ಕ್ಕೂ ಹೆಚ್ಚು ನುರಿತ ಕುಸ್ತಿ ತಾಂತ್ರಿಕ ಸಿಬ್ಬಂದಿಗಳು ಪಂದ್ಯಾವಳಿಗಳನ್ನು ನಡೆಸಿಕೊಟ್ಟರು. ವಿವಿಧ ದೇಹತೂಕದ ವಿಭಾಗದಲ್ಲಿ ಸ್ಪರ್ದಿಸಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದ 46 ಕುಸ್ತಿಪಟುಗಳಿಗೆ ಪದಕ ಮತ್ತು ಪ್ರಮಾಣಪತ್ರವನ್ನು ವಿತರಿಸಿ ಗೌರವಿಸಲಾಯಿತು.

ಬೀಚ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಕುಸ್ತಿಪಟುಗಳು ತಮ್ಮ ಅದ್ಬುತ ಕುಸ್ತಿ ಪ್ರದರ್ಶನವನ್ನು ನೀಡುವ ಮೂಲಕ ಮಂಗಳೂರಿಗರ ಗಮನ ಸೆಳೆದರು.

ಸಮಗ್ರ ಪ್ರಶಸ್ತಿ ಪಡೆದ ಪುರುಷರ ವಿಭಾಗದಲ್ಲಿ ರಾಜ್ಯಮಟ್ಟದ ಬೀಚ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಅದ್ಬುತ ಕುಸ್ತಿ ಪ್ರದರ್ಶನ ತೋರಿದ ದಾವಣಗೆರೆ ಜಿಲ್ಲಾ ಕುಸ್ತಿಪಟುಗಳು ಅಂಡರ್ 17 ಮತ್ತು ಹಿರಿಯರ ಎರಡೂ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಸಮಗ್ರ ಪ್ರಶಸ್ತಿಯನ್ನು ಪಡೆದರು, ಅಂಡರ್- 17 ವಿಭಾಗದಲ್ಲಿ ದ್ವೀತಿಯ ಸ್ಥಾನವನ್ನು ಬಾಗಲಕೋಟೆ ಜಿಲ್ಲಾ ಕುಸ್ತಿಪಟುಗಳು, ಹಿರಿಯ ವಿಭಾಗದಲ್ಲಿ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಕುಸ್ತಿಪಟುಗಳು ಪಡೆದುಕೊಂಡರು.

ಮಹಿಳೆಯರ ವಿಭಾಗದಲ್ಲಿ ರಾಜ್ಯಮಟ್ಟದ ಬೀಚ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಅದ್ಬುತ ಕುಸ್ತಿ ಪ್ರದರ್ಶನ ತೋರಿದ ಮಂಗಳೂರು ಜಿಲ್ಲಾ ಮಹಿಳಾ ಹಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಸಮಗ್ರ ಪ್ರಶಸ್ತಿಯನ್ನು ಪಡೆದರು, ದ್ವೀತಿಯ ಸ್ಥಾನವನ್ನು ಬೆಳಗಾವಿ ಜಿಲ್ಲಾ ಮಹಿಳಾ ಕುಸ್ತಿಪಟುಗಳು ಪಡೆದರು. ಅಂಡರ್- 17 ಮಹಿಳಾ ವಿಭಾಗದಲ್ಲಿ ಹಳಿಯಾಳ ಮಹಿಳಾ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ದ್ವೀತಿಯ ಸ್ಥಾನವನ್ನು ಬೆಳಗಾವಿ ಜಿಲ್ಲಾ ಕುಸ್ತಿಪಟುಗಳು ಪಡೆದುಕೊಂಡರು. ಸಮಗ್ರ ಪ್ರಶಸ್ತಿಯನ್ನು ಪಡೆದ ಪುರುಷ ಮತ್ತು ಮಹಿಳಾ ಅಂಡರ್-17 ಮತ್ತು ಹಿರಿಯರ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಆಕರ್ಷಣೆಯ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು.

ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳು, ಅಖಿಲ‌ ಭಾರತ ಬೀಚ್ ರೆಸ್ಲಿಂಗ್‌ ಅಸೋಸಿಯೇಷನ್ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ಬೀಚ್ ರೆಸ್ಲಿಂಗ್‌ ಕಮಿಟಿಯ ಉಪಾಧ್ಯಕ್ಷರಾದ ನಿತ್ಯಾನಂದ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ತಾಂತ್ರಿಕ ವಿಭಾಗದ ಚೇರ್ಮನ್ ಡಾ.ವಿನೋದ್ ಕುಮಾರ್.ಕೆ ಕುಸ್ತಿ ಪಂದ್ಯಾವಳಿಗಳನ್ನು ನಡೆಸಿಕೊಟ್ಟರು. ಕರ್ನಾಟಕ ಕುಸ್ತಿ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಶ್ರೀನಿವಾಸ್ ಬೀಚ್ ರೆಸ್ಲಿಂಗ್‌ ಚಾಂಪಿಯನ್ ಶಿಪ್ ಯಶಸ್ವಿಯಾಗಲು ಶ್ರಮಿಸಿದ್ದರು.

ಎರಡೂ ದಿನದ ಕಾರ್ಯಕ್ರಮದಲ್ಲಿ ಹಲವಾರು ಗಣ್ಯ ವ್ಯಕ್ತಿಗಳು, ಕ್ರೀಡಾಪಟುಗಳು, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯನ್ನು ಭಾಗವಹಿಸಿ ಕುಸ್ತಿಪಟುಗಳನ್ನು ಪ್ರೋತ್ಸಾಹಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕುಸ್ತಿ ಸಂಘದ ಉಪಾಧ್ಯಕ್ಷರಾದ ಪ್ರಸಾದ್ ಶೆಟ್ಟಿ, ಸುಜಿತ್ ರೈ, ಖಜಾಂಚಿ ಶ್ರೀನಿವಾಸ್ ಅಂಗರಕೋಡಿ, ಜಂಟಿ ಕಾರ್ಯದರ್ಶಿ ಕುಮಾರ್.ಜೆ, ಮಿಥುನ್ ದೇವಾಡಿಗ, ಸಂಜಯ್ ನಾಯಕ್, ಕರ್ನಾಟಕ ಬೀಚ್ ರೆಸ್ಲಿಂಗ್‌ ಕಮಿಟಿಯ ಸಂಚಾಲಕ ಪ್ರಸಾದ್ ಶೆಟ್ಟಿ, ಕರ್ನಾಟಕ ರೆಸ್ಲಿಂಗ್‌ ಅಸೋಸಿಯೇಷನ್ ನ ಮೀಡಿಯಾ ಅಕ್ರಿಡಿಟೇಶನ್ ಸದಸ್ಯರಾದ ರಾಮದಾಸ್ ಶೆಟ್ಟಿ, ಕರ್ನಾಟಕ ಕುಸ್ತಿ ಸಂಘದ ಸದಸ್ಯರಾದ ಸರ್ಮಥ್ ಭಂಡಾರಿ, ಕೇಂದ್ರ ಕಛೇರಿ ಸಿಇಓ ನಾಗೇಶ್.ಎಸ್, ರಾಜೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here