ಇಂದು ನಾಮಪತ್ರ ಹಿಂತೆಗೆತಕ್ಕೆ ಕೊನೆ ದಿನ
- ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಫೆ.9ರಂದು ಚುನಾವಣೆ ನಡೆಯಲಿದೆ. ಒಟ್ಟು 12 ಸ್ಥಾನಕ್ಕೆ 32 ನಾಮಪತ್ರ ಸಲ್ಲಿಕೆಯಾಗಿದೆ. ಫೆ.3 ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನವಾಗಿದ್ದು 3 ಗಂಟೆ ವೇಳೆಗೆ ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಲಭಿಸಲಿದೆ.
ಸಾಲಗಾರ ಸಾಮಾನ್ಯಕ್ಕೆ ಮೀಸಲಾಗಿರುವ 5 ಸ್ಥಾನಕ್ಕೆ ಧನಂಜಯ ಅಲೆಕ್ಕಿ, ಕೊರಗಪ್ಪ ಗೌಡ ಕಲ್ಲಡ್ಕ, ರವಿಪ್ರಸಾದ್ ಶೆಟ್ಟಿ ಹೊಸಮನೆ, ರವಿಚಂದ್ರ ಯಚ್.ಹೊಸವಕ್ಲು, ಜಿನ್ನಪ್ಪ ಗೌಡ ಮಿತ್ತಪರಕೆ, ಜನಾರ್ದನ ಬರೆಮೇಲು, ಸುಧಾಕರ ಬಿ ಬಾಗಿಲುಗದ್ದೆ, ಇಸ್ಮಾಯಿಲ್ ಪ್ರಿಯದರ್ಶಿನಿ, ಪೂವಪ್ಪ ಪಾಲೇರಿ, ಸೆಬಾಸ್ಟಿಯನ್ ಪುಚ್ಚೇರಿ, ಸುರೇಶ್ ಬಿ ತಿರ್ಲೆ, ಪೌಲೋಸ್ ಯಂ.ಕೆ.ಪಾದಡ್ಕ, ಪ್ರಶಾಂತ ರೈ ಅರಂತಬೈಲು, ಗಿರೀಶ್ ಸಾಲಿಯಾನ್ ಬದನೆ, ಸರ್ವೋತ್ತಮ ಗೌಡ ಹೊಸಮನೆ, ವಾರಿಜಾಕ್ಷಿ ಹೊಸಮನೆ ನಾಮಪತ್ರ ಸಲ್ಲಿಸಿದ್ದಾರೆ.
ಸಾಲಗಾರ ಮಹಿಳಾ ಮೀಸಲು 2 ಸ್ಥಾನಕ್ಕೆ ಗೀತಾ ನೇಲ್ಯಡ್ಕ, ಶೇಷಮ್ಮ ಪೈಸಾರಿ, ಉಷಾ ಅಂಚನ್ ಕುಂಡಡ್ಕ, ವಲ್ಸಮ್ಮ ಕೆ.ಟಿ.ಮೊಂಟಮೆ, ಸಾಲಗಾರ ಹಿಂದುಳಿದ ಪ್ರವರ್ಗ ಎ ಮೀಸಲು 1 ಸ್ಥಾನಕ್ಕೆ ಬಾಲಕೃಷ್ಣ ಬಿ.ಬಾಣಜಾಲು, ವಿಶ್ವನಾಥ ಪೂಜಾರಿ ಕಲಾಯಿ, ವಿಶ್ವನಾಥ ನೆಕ್ಕರೆ, ಸಾಲಗಾರ ಹಿಂದುಳಿದ ಪ್ರವರ್ಗ ಬಿ ಮೀಸಲು 1 ಸ್ಥಾನಕ್ಕೆ ಜಯಾನಂದ ಪಿ.ಬಂಟ್ರಿಯಾಲ್, ಗಂಗಾಧರ ಶೆಟ್ಟಿ ಹೊಸಮನೆ, ಸಾಲಗಾರ ಅನುಸೂಚಿತ ಜಾತಿ ಮೀಸಲು 1 ಸ್ಥಾನಕ್ಕೆ ಜಾನಕಿ ಬಿರ್ಮಗುಂಡಿ, ಹರೀಶ್ ಎ.ನುಜೂಲು, ಸಾಲಗಾರ ಅನುಸೂಚಿತ ಪಂಗಡ ಮೀಸಲು 1 ಸ್ಥಾನಕ್ಕೆ ಬಾಬು ನಾಯ್ಕ್ ಅಲಂಗಪೆ, ವಾಸಪ್ಪ ನಾಯ್ಕ್ ಗಾಂದರಿಮಜಲು ನಾಮಪತ್ರ ಸಲ್ಲಿಸಿದ್ದಾರೆ.
ಸಾಲಗಾರರಲ್ಲದ 1 ಸ್ಥಾನಕ್ಕೆ ಭಾಸ್ಕರ ರೈ ತೋಟ, ಶಿವಪ್ರಕಾಶ್ ಬೀದಿಮಜಲು ನಾಮಪತ್ರ ಸಲ್ಲಿಸಿದ್ದಾರೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮಂಗಳೂರು ಉಪವಿಭಾಗ ಮಂಗಳೂರು ಇಲ್ಲಿನ ಅಧೀಕ್ಷಕರಾದ ಬಿ.ನಾಗೇಂದ್ರ ಅವರು ಚುನಾವಣಾಧಿಕಾರಿಯಾಗಿದ್ದಾರೆ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಅವರು ಸಹಕರಿಸಿದರು.
ಎಲ್ಲಾ ನಾಮಪತ್ರಗಳು ಕ್ರಮಬದ್ಧ:
ಫೆ.2ರಂದು ನಾಮಪತ್ರ ಪರಿಶೀಲನೆ ನಡೆದಿದ್ದು ಎಲ್ಲಾ ನಾಮಪತ್ರಗಳು ಕ್ರಮಬದ್ಧವಾಗಿದೆ. ಫೆ.3 ಮಧ್ಯಾಹ್ನ 3 ಗಂಟೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು ಆ ಬಳಿಕ ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.