ದಕ್ಷಿಣ ಕನ್ನಡ ಟೆಲಿಕಾಂ ಸಲಹ ಸಮಿತಿಗೆ ನಿತೀಶ್ ಕುಮಾರ್ ಶಾಂತಿವನ ನೇಮಕ

0

ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ರೆವೆನ್ಯೂ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಕನ್ನಡ ಜಿಲ್ಲಾ ದೂರ ಸಂಪರ್ಕ ಸಲಹಾ ಮಂಡಳಿಗೆ ನಿತೀಶ್ ಕುಮಾರ್ ಶಾಂತಿವನರವರನ್ನು ಮಂಗಳೂರು ಸಂಸದರ ಶಿಫಾರಸ್ಸಿನಂತೆ ನೇಮಕಗೊಳಿಸಲಾಯಿತು.

ಒಳಮೊಗ್ರು ಗ್ರಾಮದ ಶಾಂತಿವನ ನಿವಾಸಿಯಾಗಿರುವ ನಿತೀಶ್ ಕುಮಾರ್‌ರವರು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ, ಕುಂಬ್ರ ಮೂರ್ತೆದಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ನಿರ್ದೇಶಕರಾಗಿ ಕೆಪಿಎಸ್ ಕುಂಬ್ರ ಇದರ ಕಾರ್ಯಧ್ಯಕ್ಷರಾಗಿ, ಕುಂಬ್ರ ಸ್ಪಂದನ ಸೇವಾ ಬಳಗದ ಗೌರವ ಸಲಹೆಗಾರರಾಗಿ, ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಆಡಳಿತ ಸಮಿತಿಯಲ್ಲಿ ಪದಾಧಿಕಾರಿಯಾಗಿ, ಹಿಂದೂ ಸಂಘಟನೆಯಲ್ಲಿ ಹಿಂದೆ ವಿವಿಧ ಜವಾಬ್ದಾರಿಯಲ್ಲಿ ಕೆಲಸ ಮಾಡಿರುವ ಅನುಭವಿ ಅಲ್ಲದೆ ಹಲವು ಸಂಘ ಸಂಸ್ಥೆಯಲ್ಲಿ ಸೇವೆ ಹಾಗೇ ಬಿಜೆಪಿಯಲ್ಲಿ ಬೂತ್ ಮಟ್ಟದಿಂದ ಮಂಡಲ ಹಾಗೂ ಜಿಲ್ಲೆಯ ತನಕ ಬೇರೆ ಬೇರೆ ಜವಾಬ್ದಾರಿ ನಿರ್ವಹಿಸಿರುತ್ತಾರೆ.

.

LEAVE A REPLY

Please enter your comment!
Please enter your name here