ಪುತ್ತೂರು: ಪರ್ಲಡ್ಕ ಶಿವಪೇಟೆ ವಿವೇಕಾನಂದ ಶಿಶುಮಂದಿರದ ’ಶಿಶು ಸಂಭ್ರಮ’ ವಾರ್ಷಿಕ ಹಬ್ಬ ಜ.25ರಂದು ನಡೆಯಿತು. ಭಾರತಮಾತೆಗೆ ಪುಷ್ಪಾರ್ಚನೆ ಮಾಡುವುದರ ಜೊತೆಗೆ ಅತಿಥಿಗಳಿಂದ ದೀಪ ಪ್ರಜ್ವಲನೆ, ಶಿಶುಮಂದಿರದ ಪುಟಾಣಿಗಳಿಂದ ದೀಪ ಜ್ಯೋತಿ ಹಾಡಿನ ಮೂಲಕ ಸಭಾಕಾರ್ಯಕ್ರಮ ನಡೆಯಿತು.
ಅತಿಥಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಾರತಿ ಜೆ.ಎ ರವರು ಸಭೆಯನ್ನುದೇಶಿಸಿ ಮಾತನಾಡಿ, ಶಿಶುಮಂದಿರ ಒಂದು ಹೂದೋಟವಿದ್ದಂತೆ ಅಲ್ಲಿ ವಿವಿಧ ರೀತಿಯ ಹೂಗಳಿವೆ. ಪ್ರತಿಯೊಂದು ಮಗುವಿನಲ್ಲಿಯೂ ಅದರದ್ದೇ ಆದ ರೀತಿಯ ಪ್ರತಿಭೆಯಿದೆ.ಪೋಷಕರು ಮಕ್ಕಳನ್ನು ಅತೀ ಪ್ರೀತಿ, ಶಿಸ್ತಿನಿಂದ ಬೆಳೆಸಬಾರದು. ಹೆತ್ತವರು ಸಂಸ್ಕಾರಯುತರಾಗಿದ್ದರೆ ಮಾತ್ರ ತಮ್ಮ ಮಕ್ಕಳನ್ನು ಸಂಸ್ಕಾರಯುತರಾಗಿ ಬೆಳೆಸಲು ಸಾಧ್ಯ ಎಂದರು.
ಅತಿಥಿ ಕರ್ನಾಟಕ ಬ್ಯಾಂಕ್ನ ನಿವೃತ್ತ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವೇಣುಗೋಪಾ ಭಟ್ ಮಾಂಬಾಡಿ ಶಿಶುಮಂದಿರದ ಬಗ್ಗೆ ಮಾತನಾಡಿ, ಶಿಶುಮಂದಿರದಲ್ಲಿ ನೀಡಿರುವಂತಹ ಸಂಸ್ಕಾರವನ್ನು ಪೋಷಕರು ಮುಂದುವರೆಸಿಕೊಂಡು ಹೋಗಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ರೂಪಲೇಖ ಮಾತನಾಡಿ, ಮಗುವಿನ ವ್ಯಕ್ತಿತ್ವವನ್ನು ಬಾಲ್ಯದಿಂದಲೇ ನಿರ್ಮಾಣ ಮಾಡಿದರೆ ಮಾತ್ರ ಉತ್ತಮ ವ್ಯಕ್ತಿತ್ವ ಪಡೆಯಲು ಸಾಧ್ಯ ಎಂದರು.
ಪುಟಾಣಿ ಗೌರವ್ ಸ್ವಾಗತಿಸಿದರು. ಶಿಶುಮಂದಿರದ ಅಧ್ಯಕ್ಷ ಕೆ. ರಾಜಗೋಪಾಲ್ ಭಟ್ ಪ್ರಾಸ್ತಾವಿಕ ಮತ್ತು ಪರಿಚಯ, ಶಿಶುಮಂದಿರದ ಹಿರಿಯ ರೇಖಾ ಕುಮಾರಿ ವರದಿ ವಾಚಿಸಿದರು.
ಶಿಶುಮಂದಿರದ ಹಿರಿಯ ವಿದ್ಯಾರ್ಥಿ ಆದಿತ್ಯ ನಾರಾಯಣ ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು.
ವಾರ್ಷಿಕೋತ್ಸವದ ಪ್ರಯುಕ್ತ ಮಾತೆಯರಿಗೆ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮವದ ಬಹುಮಾನವನ್ನು ವಿತರಿಸಲಾಯಿತು. ಶಿಶುಸಂಭ್ರಮದ ಸವಿನೆನಪಿಗಾಗಿ ಮಕ್ಕಳಿಗೆ ಸ್ಮರಣಿಕೆಯನ್ನು ನೀಡಲಾಯಿತು. ಬಳಿಕ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ, ಮಾತೆಯರಿಂದ, ಮಾತಾಜಿಯವರಿಂದ ಸಾಂಸ್ಕೃತಿಕ ಸೌರಭ ನಡೆಯಿತು.