ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬೆನ್ನಲ್ಲೆ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮೇಲಂತಸ್ತಿನ ಸಭಾಂಗಣ ಉದ್ಘಾಟನೆ

0

ಸಹಕಾರ ಸಂಘ, ಸಂಘದ ಸದಸ್ಯರಿಗೆ ನೂತನ ಸಭಾಂಗಣ ಉಚಿತ – ನೂತನ ಅಧ್ಯಕ್ಷರ ಘೋಷಣೆ

ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಗೆ ಭಾಸ್ಕರ ಎಂ ಪೆರುವಾಯಿ ಮತ್ತು ಉಪಾಧ್ಯಕ್ಷರಾಗಿ ದಾಮೋದರ್ ಕುಲಾಲ್ ಅವರು ಪುನರಾಯ್ಕೆಗೊಂಡ ಬೆನ್ನಲ್ಲೆ ಕುಲಾಲ ಸಹಕಾರ ಭವನದ ಮೇಲಂತಸ್ತಿನ ಸಭಾಂಗಣವನ್ನು ಉದ್ಘಾಟಿಸಲಾಯಿತು.ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ‌ ಸದಸ್ಯ ದಿನೇಶ್ ಪಿ ವಿ ಅವರು ನೂತನ ಸಭಾಂಗಣವನ್ನು ಉದ್ಘಾಟಿಸಿದರು.


ಸಹಕಾರ ಸಂಘ, ಸಂಘದ ಸದಸ್ಯರಿಗೆ ನೂತನ ಸಭಾಂಗಣ ಉಚಿತ :
ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ನೂತನ ಅಧ್ಯಕ್ಷ ಭಾಸ್ಕರ್ ಎಂ ಪೆರುವಾಯಿ ಅವರು ಮಾತನಾಡಿ, ಮುಂದಿನ 5 ವರ್ಷಗಳ ಅವಧಿಗೆ ನಮ್ಮನ್ನು ಪುನರಾಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಅದೇ ರೀತಿ ನೂತನ ಈ ಸಭಾಂಗಣ ಮುಂದಿನ ದಿನ ಸಹಕಾರ ಸಂಘದ ಸದಸ್ಯರ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡಲಾಗುವುದು. ಮುಂದಿನ 5 ವರ್ಷದಲ್ಲಿ 25 ಶಾಖೆಗಳ ಗುರಿಯನ್ನು ಇಟ್ಟುಕೊಂಡು ನೂರು ಮಂದಿಗೆ ಉದ್ಯೋಗ ಕೊಡುವ ಯೋಜನೆ ಇಟ್ಟು ಕೊಂಡಿದ್ದೇವೆ ಎಂದರು.


ಪುತ್ತೂರು ಕುಲಾಲ ಸಂಘದ ಅಧ್ಯಕ್ಷ ಶೇಷಪ್ಪ ಕುಲಾಲ್, ಹಿರಿಯ ವಕೀಲ ಉದಯರವಿ‌ ಕುಂಬ್ಲಾಜೆ ಶುಭ ಹಾರೈಸಿದರು.‌ ಕುಲಾಲ ಸಂಘದ ಕಾರ್ಯದರ್ಶಿ ರವಿ ಪಿ ಕುಲಾಲ್, ಮಾಣಿ ಸಂಘದ ಅಧ್ಯಕ್ಷ ಮೋಹನ್ ಕುಲಾಲ್, ವಿಟ್ಲ ಸಂಘದ ಅಧ್ಯಕ್ಷ ಬಾಬು ಬಿ ಕೆ , ಬೆಳ್ಳಾರೆ ಸಂಘದ ಮಾಜಿ ಅಧ್ಯಕ್ಷ ರಾಮಣ್ಣ ಮೂಲ್ಯ, ಕುಲಾಲ ಸಹಕಾರ ಸಂಘದ ನಿರ್ದೇಶಕರಾದ ನಾಗೇಶ್ ಕುಲಾಲ್, ಪದ್ಮ ಕುಮಾರ್ ಎಚ್, ಬಿ.ಎಸ್ ಕುಲಾಲ್, ಸೇಸಪ್ಪ ಕುಲಾಲ್, ಗಣೇಶ್ ಪಿ, ಪ್ರಶಾಂತ್ ಬಂಜನ್, ರಂಜಿತ, ರೇಖಾ ದಿನೇಶ, ಪೂವಪ್ಪ ಕಡಂಬಾರ್ ವೇದಿಕೆಯಲ್ಲಿದ್ದರು. ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ಧನ ಮೂಲ್ಯ ಸ್ವಾಗತಿಸಿ, ಕಾರ್ಯಕ್ರಮ‌ ನಿರೂಪಿಸಿದರು. ಕುಲಾಲ್ ಸಂಘದ ರವಿ ಕೈತ್ತಡ್ಕ, ತೇಜ ಕುಮಾರ್, ಮಾಜಿ ಪುರಸಭೆ ಅಧ್ಯಕ್ಷ ಗಣೇಶ್ ರಾವ್, ಕೊಂಬೆಟ್ಟು ಸರಕಾರಿ ಪ್ರೌಢ ಶಾಲೆಯ ಉಪಪ್ರಾಂಶುಪಾಲ ವಸಂತ ಮೂಲ್ಯ, ಉದ್ಯಮಿ ಸಂತೋಷ್ ರೈ ನಳಿಲು ಸಹಿತ ಹಲವಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here