ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ತಂಡಕ್ಕೆ ಔಟ್ ಸ್ಟ್ಯಾಂಡಿಂಗ್ ಪರ್ಫಾರ್ಮೆನ್ಸ್ ವಿನ್ನರ್ ಪ್ರಶಸ್ತಿ

0

ಪುತ್ತೂರು: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಏರಿಯಾ ಬಿ ರೀಜನಲ್ ಕಾನ್ ಕೋರ್ಸ್ ಬಿ ಮತ್ತು ಎಫ್ ವಲಯ ಸಮ್ಮೇಳನ ಸ್ಫೂರ್ತಿ ಉಡುಪಿ ಜಿಲ್ಲೆಯ ಕುಂದಾಪುರದ ಬಸ್ರೂರು ಆದಿತ್ಯ ಷೋರ್ ರೆಸಾರ್ಟ್ ನಲ್ಲಿ ಇತ್ತೀಚೆಗೆ ನಡೆಯಿತು.

ಪುತ್ತೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷೆ ಮಲ್ಲಿಕಾ ಜೆ ರೈ ಸಾರಥ್ಯದ ಪುತ್ತೂರು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ತಂಡ ಔಟ್ ಸ್ಟ್ಯಾಂಡಿಂಗ್ ಪರ್ಫಾರ್ಮರ್ ಸ್ಪೆಷಲ್ ಪ್ರೋಗ್ರಾಮ್ ವಿನ್ನರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

NP Csl. PPF. ಚಿತ್ರ ಕುಮಾರ್, NVP ಹುಸೇನ್ ಹೈ ಕಾಡಿ, ಪುಷ್ಪ ಎಸ್ ಶೆಟ್ಟಿ, IPNP ವರ್ಗೀಸ್ ವೈದ್ಯನ್, ಸಿದ್ದಾರ್ಥ್ ಮರೇಡ್ ಬೆಳಗಾವಿ, ಡಾ. ನಾಗೇಶ್ ಫಿಜಿಷಿಯನ್ ಹಾಗೂ ಎಸ್‌ಸಿಐ ಕುಂದಾಪುರ ಇವರ ಉಪಸ್ಥಿತಿಯಲ್ಲಿ ಔಟ್ ಸ್ಟ್ಯಾಂಡಿಂಗ್ ಪರ್ಫಾರ್ಮರ್ ವಿನ್ನರ್ ಪ್ರಶಸ್ತಿಯನ್ನು ಮಲ್ಲಿಕಾ ಜೆ ರೈ, ಉಷಾ ಎನ್ ಆಚಾರ್, ರೋಹಿಣಿ ಎಂ. ಪಿ, ವೀಣಾ ಬಿ ಕೆ, ಗಂಗಾಧರ್ ಆಚಾರ್ಯ, ಪ್ರಹ್ಲಾದ್, ಅನ್ನಪೂರ್ಣಿಮಾ ಆರ್ ರೈ ಯವರ ಪುತ್ತೂರು ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

LEAVE A REPLY

Please enter your comment!
Please enter your name here