ಪುತ್ತೂರು: ಭಾರತೀಯ ಜನತಾ ಪಕ್ಷದ ವರಿಷ್ಠರ ಆಶಯದಂತೆ ಸಂವಿಧಾನ ಗೌರವ ಅಭಿಯಾನದ ಅಂಗವಾಗಿ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರ ಸರ್ವೆ ಬೊಟ್ಯಾಡಿ ಮನೆಯಲ್ಲಿ ಭೀಮಸಂಗಮ ಕಾರ್ಯಕ್ರಮ ಜರಗಿತು. ದಲಿತ ಸಮಾಜದ ಸುಮಾರು 120 ದಂಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್, ಬಿಜೆಪಿ ನಗರ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಗ್ರಾಮಾಂತರ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ದಂಪತಿಗಳ ಕಾಲಿಗೆ ನೀರೆರುದು ಬರಮಾಡಿಕೊಂಡರು.ಮುತ್ತೈದೆಯರು ಅವರಿಗೆ ಬಾಗಿನ ಸಮರ್ಪಿಸಿ ಆರತಿ ಬೆಳಗಿದರು. ಸಾಮರಸ್ಯದ ಕುರಿತಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ಪ್ರಮುಖ್ ರವೀಂದ್ರ ಪಿ ಮತ್ತು ಶಿವಪ್ರಸಾದ್ ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸಹಭೋಜನ ನಡೆಯಿತು. ಬಿಜೆಪಿ ಮಹಿಳಾ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ಶಗ್ರಿತ್ತಾಯ ಉಪಸ್ಥಿತರಿದ್ದರು.
ಜಾತಿಯ ಕಾರಣದಿಂದಾಗಿರುವ ಮೇಲರಿಮೆ, ಕೀಳರಿಮೆಗಳು ಕಾರ್ಯಕ್ರಮದಲ್ಲಿ ಮಾಯವಾಗಿದ್ದವು. ಅಂಬೇಡ್ಕರ್ ಅವರ ಆಶಯದಂತೆ ಹಾಗೂ ಪಕ್ಷದ ವರಿಷ್ಠರ ಕಲ್ಪನೆಯಂತೆ ಸಾಮರಸ್ಯದ ಕಾರ್ಯಕ್ರಮ ಮೇಳೈಸಿದೆ ಎಂದು ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತಿಳಿಸಿದ್ದಾರೆ.