ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಿಂದ ಬೆಳಿಗ್ಗೆ ೧೦ಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ದತ್ತಾಂಜನೇಯ ಕ್ಷೇತ್ರದ ರಥೋತ್ಸವ, ತುಳುನಾಡ ಜಾತ್ರೆಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
ಪುತ್ತೂರು ಚೇತನಾ ಆಸ್ಪತ್ರೆಯಲ್ಲಿ ಬೆಳಿಗ್ಗೆ ೯.೩೦ರಿಂದ ಫ್ಯಾಟಿ ಲಿವರ್ ಇರುವವರಿಗೆ ಫೈಬ್ರೋಸ್ಕ್ಯಾನ್ ಗ್ರಂಥಿಯ ಉಚಿತ ತಪಾಸಣಾ ಶಿಬಿರ
ಪುತ್ತೂರು ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ (ಲ್ಯಾಂಪ್ಸ್) ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ಬೆಳಿಗ್ಗೆ ೧೦ರಿಂದ ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಚುನಾವಣೆಯ ನಾಮಪತ್ರ ಸಲ್ಲಿಕೆ
ಕೊಲ ಗ್ರಾ.ಪಂ ಸಭಾಭವನ ಗೋಕುಲನಗರದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ತೆಗ್ಗು ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕೆಯ್ಯೂರು ಗ್ರಾ.ಪಂ ೧ನೇ ವಾರ್ಡ್, ಕಣಿಯಾರು ಕಿ.ಪ್ರಾ. ಶಾಲೆಯಲ್ಲಿ ಮಧ್ಯಾಹ್ನ ೨.೩೦ಕ್ಕೆ ೪ನೇ ವಾರ್ಡ್ನ ವಾರ್ಡುಸಭೆ
ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ಬೆಳಿಗ್ಗೆ ೧೦ರಿಂದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ನಾಮಪತ್ರ ಸಲ್ಲಿಕೆ
ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೇಂದ್ರ ಕಚೇರಿಯಲ್ಲಿ ಬೆಳಿಗ್ಗೆ ೧೦.೪೫ರಿಂದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ನಾಮಪತ್ರ ಸಲ್ಲಿಕೆ
ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಛೇರಿಯಲ್ಲಿ ಬೆಳಿಗ್ಗೆ ೧೦ರಿಂದ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಯ ನಾಮಪತ್ರ ಸಲ್ಲಿಕೆ
ಕೋಡಿಂಬಾಡಿ ಅಶ್ವತ ಕಟ್ಟೆ ಚತುರ್ಥಿ ರಂಗಮಂದಿರದ ಬಳಿ ಬೆಳಿಗ್ಗೆ ೧೦.೩೦ಕ್ಕೆ ಕೋಡಿಂಬಾಡಿ ಗ್ರಾ.ಪಂನಿಂದ ವಿಶೇಷಚೇತನರ ವಿಶೇಷ ಗ್ರಾಮಸಭೆ
ಕೋಡಿಂಬಾಡಿ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೯ಕ್ಕೆ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ, ಅಪರಾಹ್ನ ೨.೩೦ರಿಂದ ಶೈಕ್ಷಣಿಕ ಕಾರ್ಯಕ್ರಮ, ಸಂಜೆ ೬.೩೦ರಿಂದ ಸಾರ್ವಜನಿಕ ಸಭಾ ಕಾರ್ಯಕ್ರಮ
ಕೆಮ್ಮಾಯಿ ಶ್ರೀ ಮಹಾವಿಷುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ಮಹಾಗಣಪತಿ ಹೋಮ, ಕಲಶ ಪೂಜೆ, ೮ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಮಧ್ಯಾಹ್ನ ೧೨ಕ್ಕೆ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ರಾತ್ರಿ ೭ರಿಂದ ಭಜನೆ, ೮ರಿಂದ ರಂಗಪೂಜೆ, ೧೦.೩೦ರಿಂದ ಪಿಲಿಭೂತ ದೈವದ ನೇಮನಡಾವಳಿಗಳು
ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದಲ್ಲಿ ಬೆಳಿಗ್ಗೆ ೯ರಿಂದ ಗಣಪತಿ ಹವನ, ಮಹಾಪೂಜೆ, ಕಬಕ, ಪುತ್ತೂರು ವಿಪ್ರರಿಂದ ರುದ್ರಪಾರಾಯಣ, ೧೦.೩೦ಕ್ಕೆ ರಥಾರೋಹಣ, ಬಟ್ಟಲು ಕಾಣಿಕೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ೯.೧೫ಕ್ಕೆ ಸುಡುಮದ್ದು ಸೇವೆ, ರಥೋತ್ಸವ, ಕಟ್ಟೆಪೂಜೆ, ೧೦ಕ್ಕೆ ಉತ್ಸವ, ದರ್ಶನ ಬಲಿ, ೧೧.೩೦ರಿಂದ ವಸಂತಕಟ್ಟೆ ಪೂಜೆ, ಅಷ್ಟಾವಧಾನ ಸೇವೆ, ಬಟ್ಟಲು ಕಾಣಿಕೆ
ಇರ್ದೆ ಪೂಮಾಣಿ-ಕಿನ್ನಿಮಾಣಿ, ರಾಜನ್ ದೈವಗಳ ಕದಿಕೆ ಚಾವಡಿಯಲ್ಲಿ ಬೆಳಿಗ್ಗೆ ೯ರಿಂದ ಕಿನ್ನಿಮಾಣಿ ದೈವದ ನೇಮ
ಕಡಬ ತಲೇಕಿ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ಬೆಳಿಗ್ಗೆ ೧೦ರಿಂದ ಭಜನಾ ಸೇವೆ, ರಾತ್ರಿ ೭ರಿಂದ ಶ್ರೀ ಶ್ರೀನಿವಾಸ ದೇವರ ಭಕ್ತಿ ಗೀತೆಗಳ ಧ್ವನಿ ಸುರುಳಿ ಬಿಡುಗಡೆ, ೭.೩೦ರಿಂದ ಭಕ್ತಿಗಾನ ವೈಭವ
ಅನಂತಾಡಿ ಶ್ರೀ ಉಳ್ಳಾಲ್ತಿ ವೈದ್ಯನಾಥೇಶ್ವರ, ಹೊಸಮ್ಮ ಶ್ರೀ ಬ್ರಹ್ಮಬೈದರ್ಕಳ ಗರಡಿ, ಅಣ್ಣಪ್ಪ ಪಂಜುರ್ಲಿ ಪರಿವಾರ ದೈವಗಳ ಕ್ಷೇತ್ರ ಬಾಕಿಲಗುತ್ತುವಿನಲ್ಲಿ ಸಂಜೆ ೬ಕ್ಕೆ ಕುರಿತಂಬಿಲ
ಕೆದಂಬಾಡಿ ಗ್ರಾಮದೈವ ಶ್ರೀ ಶಿರಾಡಿ ದೈವಸ್ಥಾನ, ಇದ್ಟಾಡಿಯಲ್ಲಿ ಬೆಳಿಗ್ಗೆ ೭.೩೦ಕ್ಕೆ ವಾರ್ಷಿಕ ನೇಮೋತ್ಸವದ ಗೊನೆ ಮುಹೂರ್ತ