ಪುತ್ತೂರು: ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನೂತನ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಕಿಶೋರ್ ಕೊಳತ್ತಾಯ ಅವರು ಪುನರಾಯ್ಕೆ ಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಶ್ರೀಧರ್ ಗೌಡ ಕಣಜಾಲು ಆಯ್ಕೆಗೊಂಡಿದ್ದಾರೆ.
ನೂತನ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಗೆ ಜ.25ರಂದು ಚುನಾವಣೆ ನಡೆದಿತ್ತು.ಸಾಮಾನ್ಯ ಮೀಸಲು ಸ್ಥಾನದಿಂದ ಬ್ಯಾಂಕಿನ ಹಾಲಿ ಅಧ್ಯಕ್ಷ ಕಿಶೋರ್ ಕೊಳತ್ತಾಯ, ಚಂದ್ರಶೇಖರ ರಾವ್ ಬಪ್ಪಳಿಗೆ, ಸುಜೀಂದ್ರ ಪ್ರಭು, ರಾಜು ಶೆಟ್ಟಿ, ಶ್ರೀಧರ ಗೌಡ ಕಣಜಾಲು, ಶ್ರೀಧರ ಪಟ್ಲ, ರಾಮಚಂದ್ರ ಕಾಮತ್, ಮಹಿಳಾ ಮೀಸಲು ಸ್ಥಾನದಿಂದ ವೀಣಾ, ಸೀಮಾ, ಪ.ಜಾತಿ ಮೀಸಲು ಸ್ಥಾನದಿಂದ ಗಣೇಶ್ ಕೌಕ್ರಾಡಿ, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಮಲ್ಲೇಶ್ ಕುಮಾರ್, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ಕಿರಣ್ ಕುಮಾರ್ ರೈ ಅವರು ಗೆಲುವು ಸಾಧಿಸಿದ್ದಾರೆ.13 ಸ್ಥಾನಗಳ ಪೈಕಿ ಪ.ಪಂಗಡ ಮೀಸಲು ಸ್ಥಾನದಿಂದ ಸಹಕಾರ ಭಾರತಿಯ ಹರೀಶ್ ಬಿಜತ್ರೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.