ಜವುಳಿ ಖರೀದಿಗೆ ಡಿಸ್ಕೌಂಟ್‌ನೊಂದಿಗೆ ಸ್ಪೆಷಲ್ ಗಿಫ್ಟ್‌ : ಸ್ನೇಹ ಸಿಲ್ಕ್ಸ್ ರೆಡಿಮೇಡ್ಸ್‌ನಲ್ಲಿ ವಿಶೇಷ ವಾರ್ಷಿಕ ಸಂಭ್ರಮ

0

ಪುತ್ತೂರು:ಪುತ್ತೂರಿನ ಪ್ರತಿಷ್ಠಿತ ಜವುಳಿ ಮಳಿಗೆಗಳಲ್ಲಿ ಒಂದಾಗಿರುವ ಬೊಳುವಾರಿನ ಸ್ನೇಹ ಸಿಲ್ಕ್ಸ್ ರೆಡಿಮೇಡ್ಸ್‌ನಲ್ಲಿ ಗ್ರಾಹಕರಿಗೆ ವಿಶಿಷ್ಠ ಕೊಡುಗೆಗಳನ್ನು ನೀಡುವ ಮೂಲಕ ವಿಶೇಷ ವಾರ್ಷಿಕ ಸಂಭ್ರಮವನ್ನು ಆಚರಿಸಲಾಗುತ್ತಿದೆ.


ಸಂಸ್ಥೆಯ ವಾರ್ಷಿಕ ಸಂಭ್ರಮವನ್ನು ತಾನು ಮಾತ್ರ ಆಚರಿಸದೆ ತನ್ನ ಗ್ರಾಹಕರಿಗೂ ಆಚರಿಸಲು ಸಂಸ್ಥೆ ಅವಕಾಶ ಕಲ್ಪಿಸಿದ್ದು ವಸಗಳ ಖರೀದಿಗೆ ಡಿಸ್ಕೌಂಟ್‌ನೊಂದಿಗೆ ಸ್ಪೆಷಲ್ ಗಿಫ್ಟ್‌ ಗಳನ್ನು ಪಡೆಯುವ ಸದಾವಕಾಶವನ್ನು ಸಂಸ್ಥೆ ನೀಡುತ್ತಿದೆ.ಗುಣಮಟ್ಟದಲ್ಲಿ ಶ್ರೇಷ್ಠತೆ ಹಾಗೂ ಹಣದಲ್ಲಿ ಗರಿಷ್ಠ ಉಳಿತಾಯ ಜೊತೆಗೆ ಉಡುಗೊರೆಗಳನ್ನು ಪಡೆಯುವ ಅವಕಾಶ ಗ್ರಾಹಕರಿಗೆ ಕಲ್ಪಿಸಲಾಗಿದೆ. ಸಿಲ್ಕ್ ಸಾರಿ, ಕಂಜೀವರಂ ಸಾರಿ, ಸಾಪ್ಟ್ ಸಿಲ್ಕ್ ಸಾರಿ, ಮಕ್ಕಳ ರೆಡಿಮೆಡ್ ಡ್ರೆಸ್‌ಗಳು, ಲೇಡಿಸ್ ವೆಸ್ಟರ್ನ್ ಡ್ರೆಸ್‌ಗಳ ಅಮೋಘ ಸಂಗ್ರಹವಿದೆ.ಮಕ್ಕಳು, ಮಹಿಳೆಯರು ಹಾಗೂ ಪುರುಷರ ಎಲ್ಲಾ ರೀತಿಯ ಉಡುಪುಗಳ ಖರೀದಿಗೆ ಡಿಸ್ಕೌಂಟ್ ಜೊತೆಗೆ ಸ್ಪೆಷಲ್ ಗಿಫ್ಟ್‌ ದೊರೆಯಲಿದೆ.ಕಂಪೆನಿಯಿಂದ ನೇರವಾಗಿ ಗ್ರಾಹಕರಿಗೆ ದೊರೆಯುತ್ತಿದ್ದು ಗುಣಮಟ್ಟದ ಬಟ್ಟೆಗಳ ಖರೀದಿ ಜೊತೆಗೆ ಅತೀ ಕಡಿಮೆ ಬೆಲೆಯಲ್ಲಿ ಖರೀದಿಸಿ ಹಣ ಉಳಿತಾಯ ಮಾಡಬಹುದು.ಈಗಾಗಲೇ ಪ್ರಾರಂಭಗೊಂಡಿರುವ ವಿಶೇಷ ವಾರ್ಷಿಕ ಸಂಭ್ರಮವು ಸೀಮಿತ ದಿನಗಳವರೆಗೆ ಮಾತ್ರವೇ ಇದ್ದು ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.‌


ವಿಪುಲ ಆಯ್ಕೆ… ಹೇರಳ ವಿನ್ಯಾಸ.. ಸರಳ ಬೆಲೆ…:
ಪುತ್ತೂರಿನ ಜನತೆಯ ಮನದಿಚ್ಚೆಯ ವಸ್ತ್ರ ವಿನ್ಯಾಸಗಳು ಹಾಗೂ ವಿಪುಲ ಆಯ್ಕೆಗಳ ಅವಕಾಶಗಳೊಂದಿಗೆ ಜವುಳಿ ಉದ್ಯಮದಲ್ಲಿ 32 ವರ್ಷಗಳ ಸುದೀರ್ಘ ಅನುಭವಗಳೊಂದಿಗೆ ಬೊಳುವಾರು ಆಂಜನೇಯ ಮಂತ್ರಾಲಯದ ಬಳಿ ಇರುವ ಶಿವಗುರು ಕಾಂಪ್ಲೆಕ್ಸ್‌ನಲ್ಲಿ 3 ಅಂತಸ್ತುಗಳನ್ನು ಹೊಂದಿರುವ ಸ್ನೇಹ ಜವುಳಿ ಮಳಿಗೆ ಜವುಳಿ ಉದ್ಯಮ ಕ್ಷೇತ್ರದಲ್ಲಿ ಹೊಸ ವಾತಾವರಣ ಸೃಷ್ಟಿಸಿದೆ.ಸುಮಾರು 4500 ಚದರ ಅಡಿ ವಿಸ್ತೀರ್ಣದ ಸ್ವಂತ ಕಟ್ಟಡದಲ್ಲಿರುವ ಸಂಪೂರ್ಣ ಹವಾನಿಯಂತ್ರಿತ ಮಳಿಗೆ, ವಿಶಾಲವಾದ ವಾಹನ ಪಾರ್ಕಿಂಗ್ ಹಾಗೂ ಲಿಪ್ಟ್ ವ್ಯವಸ್ಥೆಯನ್ನು ಒಳಗೊಂಡಿದೆ.‌


ಸಂಸ್ಥೆಯ ಮ್ಹಾಲಕರಾಗಿರುವ ಸತೀಶ್ ಎಸ್.ರವರು 1990ರಿಂದ ಜವುಳಿ ಉದ್ಯಮ ಕ್ಷೇತ್ರದಲ್ಲಿದ್ದು, ಉದ್ಯಮದ ಪ್ರತಿಯೊಂದು ಏಳುಬೀಳುಗಳನ್ನು ಅರ್ಥೈಸಿ ಪುತ್ತೂರು ಸುಳ್ಯ ಭಾಗದಲ್ಲಿ ಅನೇಕ ಜವುಳಿ ಉದ್ಯಮಗಳನ್ನು ನಡೆಸಿ ಯಶಸ್ಸು ಸಾಧಿಸಿದವರು.ತನ್ನ ಶಿಕ್ಷಣದ ಅವಧಿಯಲ್ಲಿ ಉಜಿರೆಯ ರತ್ನ ಮಾನಸ ಹಾಸ್ಟೆಲ್‌ನಲ್ಲಿದ್ದು, ಅಲ್ಲಿ ಸ್ವ-ಉದ್ಯೋಗದ ಬಗ್ಗೆ ಸಾಕಷ್ಟು ತರಬೇತಿಯನ್ನು, ಅನುಭವವನ್ನೂ ಪಡೆದುಕೊಂಡು ಅಲ್ಲಿನ ‘ಜೀವನ ಶಿಕ್ಷಣ’ ಪರಿಕಲ್ಪನೆ ಸ್ವಾವಲಂಬನೆ ಸ್ವ-ಉದ್ಯೋಗಕ್ಕೆ ಪ್ರೇರಣೆ ನೀಡಿತ್ತು.ಬಳಿಕ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ಶಿಕ್ಷಣ ಮಾಡಿ ಹಲವು ಕಡೆ ಉದ್ಯಮ ಆರಂಭಿಸಿದ್ದರು.ತಯಾರಕರು ಮತ್ತು ವಿತರಕರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ.ತಾನು ಉದ್ಯಮ ನಡೆಸಿದ್ದಲ್ಲದೇ ತನ್ನೊಡನೆ ಇದ್ದವರಿಗೂ ಇಂತಹ ಉದ್ಯಮ ನಡೆಸಲು ಪ್ರೋತ್ಸಾಹ ನೀಡಿ ಅವರನ್ನೂ ಉದ್ಯಮದಲ್ಲಿ ಮೇಲಕ್ಕೆತ್ತುವ ಕಾರ್ಯ ನಡೆಸಿ ಯಶಸ್ಸು ಸಾಽಸಿದವರು ಸತೀಶ್ ಎಸ್.ರವರು.ಭಾರತದಾದ್ಯಂತ ಸಂಚರಿಸಿ ಜವುಳಿ ತಯಾರಕರೊಡನೆ ಸಂಪರ್ಕ ಮತ್ತು ಅನುಭವ ಸಾಧಿಸಿದ್ದಾರೆ.

ದೇವಸ್ಥಾನ, ದೈವಸ್ಥಾನಗಳ ಬ್ರಹ್ಮಕಲಶೋತ್ಸವ, ಜಾತ್ರೆ, ನೇಮೋತ್ಸವಗಳಿಗೆ ಬೇಕಾದಂತಹ ಎಲ್ಲಾ ರೀತಿಯ ವಸಗಳು, ಅಲಂಕಾರಗಳಿಗೆ ಬೇಕಾದ ಹೊಸ ಮಾದರಿಯ ಬಂಟಿಂಗ್ಸ್, ಓಂ ಫ್ಲಾಗ್ ಗಳು ಮಳಿಗೆಯಲ್ಲಿ ಹೋಲ್‌ಸೇಲ್ ದರದಲ್ಲಿ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here