ಪುತ್ತೂರು: ಸರಿಸುಮಾರು 386 ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ ವಾರ್ಷಿಕ ನೇಮೋತ್ಸವವು ಜ.25ರಂದು ಮಣ್ಣಾಪು ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆದು ಆರು ಸಾವಿರಕ್ಕೂ ಮಿಕ್ಕಿ ಭಕ್ತರ ಆಗಮಿಸುವಿಕೆಯಿಂದ ನೇಮೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈ ಹಿನ್ನೆಲೆಯಲ್ಲಿ ಇದರ ಕೃತಜ್ಞತಾ ಸಭೆಯು ಫೆ.2 ರಂದು ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಜರಗಿತು.
ದೈವಸಂಕಲ್ಪದೊಂದಿಗೆ ಕಾರ್ಯಗಳು ಯಶಸ್ವಿ-ರವೀಂದ್ರ ಶೆಟ್ಟಿ ನುಳಿಯಾಲು:
ಮಣ್ಣಾಪು ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ಮಾತನಾಡಿ, ಮಣ್ಣಾಪು ಈ ಭಾಗದಲ್ಲಿ ನಡೆಯುವ ನೇಮೋತ್ಸವ, ಸಂಕ್ರಮಣ ಅಗೇಲು ಸೇವೆ ಇತ್ಯಾದಿ ಧಾರ್ಮಿಕ ಕಾರ್ಯಗಳು ದೈವಸಂಕಲ್ಪದೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ. ವರ್ಷದಿಂದ ವರ್ಷ ಶ್ರೀ ಕ್ಷೇತ್ರಕ್ಕೆ ಹರಿದು ಬರುವ ಭಕ್ತಸಾಗರದ ಸಂಖ್ಯೆ ಹೆಚ್ಚುತ್ತಲೇ ಇದೆ. ಶ್ರೀ ಕ್ಷೇತ್ರದಲ್ಲಿ ವರ್ಷಕ್ಕೆ ಒಂದೇ ನೇಮ ಆಗುತ್ತಿದ್ದು, ಹರಕೆಯ ನೇಮಗಳು ನಡೆಯುತ್ತಿರುತ್ತದೆ. ಈ ಬಾರಿಯ ನೇಮೋತ್ಸವ ಕಾರ್ಯಕ್ರಮವು ಪ್ರತಿಯೊಬ್ಬರ ಸಹಕಾರದಿಂದ ಯಶಸ್ವಿಯಾಗಿ ನಡೆದಿದೆ ಎನ್ನಲು ಖುಶಿಯಾಗುತ್ತದೆ. ಮುಂದಿನ ದಿನಗಳಲ್ಲಿ ಶ್ರೀ ಕೊರಗಜ್ಜನ ಮಹಿಮೆಯಿಂದ ಶ್ರೀ ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳು ಯಶಸ್ವಿಯಾಗಿ ನಡೆಯಲಿ, ಭಕ್ತರ ಸಂಕಲ್ಪವನ್ನು ಶ್ರೀ ಕೊರಗಜ್ಜ ಈಡೇರಿಸಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ.
ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ ಮಣ್ಣಾಪು, ಗೌರವ ಸಲಹೆಗಾರರಾದ ವಿಶ್ವನಾಥ ನಾಯ್ಕ ಅಮ್ಮುಂಜ, ಗಂಗಾಧರ್ ಮಣ್ಣಾಪು, ನೈತಾಡಿ ಪಂಚಮಿ ಶಾಮಿಯಾನದ ವಿಶ್ವನಾಥ್ ನಾಯ್ಕ್, ಸಹ್ಯಾದ್ರಿ ಸೌಂಡ್ಸ್ ಮತ್ತು ಲೈಟ್ಸ್ನ ಭವಿತ್ ಶಿಬರ, ಸುಜೀರ್ ಶೆಟ್ಟಿ ನುಳಿಯಾಲು ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ಕ್ಷೇತ್ರದ ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಮೊಟ್ಟೆತ್ತಡ್ಕ ಸ್ವಾಗತಿಸಿ, ವಂದಿಸಿದರು.