ಉಪ್ಪಿನಂಗಡಿ:ಶ್ರೀರಾಮ ಶಾಲೆ ವೇದಶಂಕರನಗರ ಉಪ್ಪಿನಂಗಡಿ ರಥ ಸಪ್ತಮಿ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಫೆ.4ರಂದು ಜರಗಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ಸಹಾಯಕ ಆರಕ್ಷಕ ಉಪನಿರೀಕ್ಷಕ ಹರಿಪ್ರಸಾದ್ , ಶಾಲಾ ಸಂಚಾಲಕ ಯು ಜಿ ರಾಧಾ, ಆಡಳಿತ ಮಂಡಳಿಯ ಅಧ್ಯಕ್ಷರಾದ ಸುನಿಲ್ ಅಣಾವು, ಉಪಾಧ್ಯಕ್ಷರಾದ ಅನುರಾಧ ಆರ್ ಶೆಟ್ಟಿ ,ಆಡಳಿತ ಮಂಡಳಿ ಸದಸ್ಯರಾದ ಜಯಂತ ಪೋರೊಳಿ, ಗುಣಕರ ಅಗ್ನಾಡಿ ಮತ್ತು ಗೀತಾಲಕ್ಷ್ಮಿ ತಾಳ್ತಜೆ, ಪ್ರೌಢವಿಭಾಗದ ಮುಖ್ಯಸ್ಥರಾದ ರಘುರಾಮ ಭಟ್.ಸಿ, ಪ್ರಾಥವಿಭಾಗದ ಮುಖ್ಯಸ್ಥರಾದ ವಿಮಲ ಉಪಸ್ಥಿತರಿದ್ದರು.
ಒಂಬತ್ತನೆಯ ತರಗತಿಯ ವಿದ್ಯಾರ್ಥಿ ತುಷಾರ್ ಎಸ್ ದೇವಾಡಿಗ, ಯೋಗ ಹಾಡನ್ನು ಹಾಡಿದರು.ಎಂಟನೆಯ ತರಗತಿಯ ಮನ್ವಿತಾ, ಯೋಗಾಭ್ಯಾಸದ ಪ್ರಯೋಜನಗಳ ಬಗ್ಗೆ, ವಿವರಿಸಿದರು.ಶಿಕ್ಷಕಿ ಉಷಾ ಇವರ ನೇತೃತ್ವದಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಯಿತು.ಶಿಕ್ಷಕಿ ಸೌಮ್ಯಲತಾ ಸ್ವಾಗತಿಸಿ, ಶಿಕ್ಷಕಿ ನಮಿತಾ ಕಾರ್ಯಕ್ರಮ ನಿರೂಪಿಸಿ,ಶಿಕ್ಷಕಿ ನೀತಾ ವಂದಿಸಿದರು.